alex Certify ಬಿಜೆಪಿ ಗೆಲುವಿನ ಗುಟ್ಟು ಬಿಚ್ಚಿಟ್ಟ ಪ್ರಧಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಗೆಲುವಿನ ಗುಟ್ಟು ಬಿಚ್ಚಿಟ್ಟ ಪ್ರಧಾನಿ

ಬಿಹಾರ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟದ ಜಯಭೇರಿ ಬಳಿಕ ಪ್ರಧಾನಿ ಮೋದಿ ಫುಲ್​ ಖುಶ್​ ಆಗಿದ್ದಾರೆ. ಬುಧವಾರ ಈ ವಿಚಾರವಾಗಿ ಮಾತನಾಡಿದ ಪ್ರಧಾನಿ ಮೋದಿ 21ನೇ ಶತಮಾನದಲ್ಲಿ ಚುನಾವಣೆಯಲ್ಲಿ ಜಯ ಗಳಿಸಬೇಕು ಅಂದ್ರೆ ಅಭಿವೃದ್ಧಿ ಬಿಟ್ಟರೆ ಮತ್ಯಾವ ಸಾಧನದಿಂದಲೂ ಸಾಧ್ಯವಿಲ್ಲ. ಅಲ್ಲದೇ ಬಿಹಾರದಲ್ಲಿ ಮಹಿಳೆಯರು ಬಿಜೆಪಿ ಪರ ಒಲವು ತೋರಿಸಿದ್ದೇ ಈ ಗೆಲುವಿಗೆ ಕಾರಣ ಎಂದು ಹೇಳಿದ್ದಾರೆ.

ಚುನಾವಣಾ ಗೆಲುವಿನ ಬಳಿಗೆ ಧನ್ಯವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಸಬ್​ ಕಾ ಸಾಥ್​, ಸಬ್​ ಕಾ ವಿಕಾಸ್​, ಸಬ್​​ ಕಾ ವಿಶ್ವಾಸ್​ ಮಂತ್ರವೇ ಬಿಹಾರದಲ್ಲಿ ನಮ್ಮ ಗೆಲುವಿನ ಮಂತ್ರವಾಗಿದೆ. ಬಿಹಾರದ ಜನರ ಅಭಿವೃದ್ಧಿಗೆ ನಿತೀಶ್​ ಕುಮಾರ್​​ ನೇತೃತ್ವದ ಎನ್​ಡಿಎ ಸೇವೆ ಸಲ್ಲಿಸಿದೆ. ಬಿಹಾರದ ಪ್ರತಿಯೊಬ್ಬ ಬಿಜೆಪಿ ನಾಯಕರು ಜನರ ಸೇವೆಗೆ ಬದ್ಧರಾಗ್ತಿರ್ತಾರೆ ಎಂದು ಹೇಳಿದ್ರು.

ಅಲ್ಲದೇ ಇದೇ ವೇಳೆ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ವಿಚಾರವಾಗಿಯೂ ಮಾತನಾಡಿದ ಅವ್ರು, 2021ರ ಮೊದಲಾರ್ಧದಲ್ಲೇ ಈ ಚುನಾವಣೆ ನಡೆಯಲಿದ್ದು, ಈ ಬಾರಿ ಬಿಜೆಪಿ, ಮಮತಾ ಬ್ಯಾನರ್ಜಿಯ 10 ವರ್ಷಗಳ ಆಡಳಿತವನ್ನ ಕೊನೆಗಾಣಿಸಲಿದೆ ಅಂತಾ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...