ಸತತ 5 ವರ್ಷಗಳಿಂದ ಗೂಗಲ್ ಫೋಟೋ ಮೂಲಕ ಮೊಬೈಲ್ಗಳಲ್ಲಿ ಉಚಿತವಾಗಿ ಸಿಗುತ್ತಿದ್ದ ಅನಿಯಮಿತ ಫೋಟೋ ಬ್ಯಾಕಪ್ ಸ್ಟೋರೇಜ್ ವ್ಯವಸ್ಥೆಗೆ ಇನ್ಮುಂದೆ ಹಣ ಪಾವತಿಸಬೇಕಾಗಿ ಬರಬಹುದು.
ಇಷ್ಟು ದಿನ ಗೂಗಲ್ ಫೋಟೋ ಸಹಾಯದಿಂದ ಮೊಬೈಲ್ ಮೆಮೊರಿ ಖಾಲಿ ಮಾಡಿಕೊಳ್ಳದೇ ಎಲ್ಲಾ ಫೋಟೋಗಳನ್ನ ಈ ಅಪ್ಲಿಕೇಶನ್ನಲ್ಲಿ ಶೇಖರಣೆ ಮಾಡಬಹುದಿತ್ತು. ಆದರೆ 2021ರ ಜೂನ್ 21ರ ಬಳಿಕ 15 ಗಿಗಾ ಬೈಟ್ ಮೆಮೊರಿ ಮಾತ್ರ ಉಚಿತವಾಗಿ ಸಿಗಲಿದೆ.
ಇಲ್ಲಿಯವರೆಗೆ ನೀವು ಗೂಗಲ್ ಫೋಟೋದಲ್ಲಿ ಶೇಖರಣೆ ಮಾಡಿಟ್ಟಿರೋ ಫೋಟೋಗಳಿಗೆ ಯಾವುದೇ ಚಾರ್ಜ್ ಇರೋದಿಲ್ಲ. ಆದರೆ ಜೂನ್ 1ರ ಬಳಿಕ 15 ಜಿಬಿಯಷ್ಟು ಡಾಕ್ಯೂಮೆಂಟ್ಗಳನ್ನ ಮಾತ್ರ ನೀವು ಫ್ರೀಯಾಗಿ ಶೇಖರಣೆ ಮಾಡಬಹುದು.
ಆದರೆ 15 ಜಿಬಿ ಬಳಿಕ ನೀವು ಒಂದೋ ನಿಮ್ಮ ಫೋಟೋಸ್ ಡಿಲೀಟ್ ಮಾಡಬೇಕು, ಇಲ್ಲವೇ ಗೂಗಲ್ ಒನ್ ಚಂದಾದಾರಗಬೇಕಾಗುತ್ತದೆ ಅಂತಾ ಕಂಪನಿ ತಿಳಿಸಿದೆ.