ಸ್ನೇಹಿತರ ಜೀವ ಉಳಿಸಲು ಕೋತಿಗಳು ಮಾನವನ ರೀತಿಯಲ್ಲಿ ವರ್ತಿಸೋದನ್ನ ನಿಮಗೆ ಪ್ರತಿದಿನ ನೋಡೋಕೆ ಆಗಲ್ಲ. ಅದರಲ್ಲೂ ಅಂತಹ ಅಪರೂಪದ ಕ್ಷಣಗಳನ್ನ ಕ್ಯಾಮರಾದಲ್ಲಿ ಸೆರೆಹಿಡಿಯೋದು ಅಂದ್ರೆ ಕಷ್ಟವೇ ಸರಿ.
ಆದರೆ ಫೋಟೋಗ್ರಾಫರ್ ವಿಲಿಯಂ ಸ್ಟೀಲ್ ಎಂಬವರು ಕೋತಿಗಳ ಅಪರೂಪದ ಕ್ಷಣವನ್ನ ಸೆರೆಹಿಡಿದಿದ್ದಾರೆ. ಅಂಗಾತ ಮಲಗಿದ್ದ ಕೋತಿಯ ಜೀವವನ್ನ ಉಳಿಸೋಕೆ ಇನ್ನೊಂದು ಕೋತಿ ಬಾಯಿಂದ ಬಾಯಿಗೆ ಉಸಿರು ನೀಡುವ ಮೂಲಕ ಪುನರುಜ್ಜೀವನ ನೀಡಲು ಯತ್ನಿಸುತ್ತಿದೆ.
ಆದರೆ ಬಳಿಕ ಕೋತಿ ಈ ರೀತಿ ಇನ್ನೊಂದು ಕೋತಿ ಉಸಿರು ಕೊಡ್ತಾ ಇರೋದು ಅವುಗಳ ಪ್ರೇಮದ ಪ್ರಕ್ರಿಯೆ ಅನ್ನೋದು ಗೊತ್ತಾಗಿದೆ. ಅಲ್ಲಿ ಮಲಗಿದ್ದ ಕೋತಿ ಹೆಣ್ಣು ಹಾಗೂ ಗಂಡು ಅದರ ಗಮನ ಸೆಳೆಯಲು ರೀತಿ ಮಾಡುತ್ತಿದೆ ಅಂತಾ ಫೋಟೋಗ್ರಾಫರ್ ಹೇಳಿದ್ದಾರೆ.