alex Certify ಕಣ್ಣಂಚನ್ನು ತೇವಗೊಳಿಸುತ್ತೆ ಕಲಾವಿದೆಯ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ಕಲಾವಿದೆಯ ಈ ವಿಡಿಯೋ

ಕಲೆಯನ್ನೇ ನಂಬಿ ಆರಾಧಿಸುವ ಅನೇಕರು ಮಾರಕ ಖಾಯಿಲೆಗೆ ತುತ್ತಾಗಿ ಜೀವ ಬಿಟ್ಟಂತಹ ಕತೆಗಳನ್ನ ಕೇಳಿದ್ದೇವೆ, ನೋಡಿದ್ದೇವೆ. ಇದೀಗ ಅಲ್ಝೈಮೇರ್​ ಎಂಬ ಮೆದುಳು ಸಂಬಂಧಿ ಕಾಯಿಲೆಯಿಂದ ನಿಧನರಾಗಿದ್ದ ನೃತ್ಯಗಾರ್ತಿಯೊಬ್ಬರ ಮನಕಲಕುವ ವಿಡಿಯೋ ವೈರಲ್​ ಆಗಿದೆ.

ಫೆಲಿಪೆ ಟ್ರೈಸ್ತನ್​ ಎಂಬವರು ಟ್ವಿಟರ್​ನಲ್ಲಿ ಈ ವಿಡಿಯೋ ಶೇರ್​ ಮಾಡಿದ್ದಾರೆ. ಇದರಲ್ಲಿ ಬ್ಯಾಲ್ಲೆರಿನಾ ನೃತ್ಯಗಾರ್ತಿಯಾಗಿದ್ದ ಮಾರ್ಟಾ ಸಿ. ಗೊಂಝಲೆಝ್​​ ಅಲ್ಝೈಮೇರ್​ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು.

ವೀಲ್​ ಚೇರ್​ನಲ್ಲೇ ಇದ್ಧ ವೃದ್ಧೆಗೆ ಹಾಡನ್ನ ಕೇಳಿಸುತ್ತಿದ್ದಂತೆಯೇ ಆಕೆ ಅಲ್ಲೇ ಕೂತು ಡ್ಯಾನ್ಸ್ ಮಾಡುವ ದೃಶ್ಯ ನೆಟ್ಟಿಗರ ಮನ ಗೆದ್ದಿದೆ. ಅಂದ ಹಾಗೆ ಮಾರ್ಟಾ 2019ರಲ್ಲಿ ಅಲ್ಝೈಮರ್​ನಿಂದಾಗಿ ಮೃತರಾಗಿದ್ದಾರೆ.

ನೆನಪಿನ ಶಕ್ತಿ ಕೊರತೆ ಕಾಯಿಲೆಯಿಂದ ಬಳಲುತ್ತಿದ್ದರೂ ಸಹ ಹಾಡನ್ನ ಕೇಳಿದೊಡನೆಯೇ ಮತ್ತೊಮ್ಮೆ ನೃತ್ಯಗಾರ್ತಿಯಂತೆ ಕುಣಿಯಲೆತ್ನಿಸಿದ ಈ ವಿಡಿಯೋ ಕಂಡ ನೆಟ್ಟಿಗರು ಫಿದಾ ಆಗಿದ್ದಾರೆ.

https://twitter.com/felipetristan/status/1325562270861103104?ref_src=twsrc%5Etfw%7Ctwcamp%5Etweetembed%7Ctwterm%5E1325644213401251846%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fwatch-former-ballerina-with-alzheimers-rejoices-her-old-dance-to-swan-lake-in-heart-warming-video-3065669.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...