ವಿಶ್ವದ ಅತಿ ಕಿರಿಯ ಕಂಪ್ಯೂಟರ್ ಪ್ರೋಗ್ರಾಮರ್ 6 ವರ್ಷದ ಈ ಪೋರ..! 11-11-2020 1:20PM IST / No Comments / Posted In: Latest News, India ಅಹಮದಾಬಾದ್ನ ಆರು ವರ್ಷದ ಬಾಲಕ ವಿಶ್ವದ ಅತ್ಯಂತ ಕಿರಿಯ ಕಂಪ್ಯೂಟರ್ ಪ್ರೋಗ್ರಾಮರ್ ಎಂಬ ಕೀರ್ತಿಗೆ ಭಾಜನನಾಗಿದ್ದಾನೆ. ಪೈಥಾನ್ ಪ್ರೋಗ್ರಾಮಿಂಗ್ ಪರೀಕ್ಷೆ ಪೂರ್ಣಗೊಳಿಸಿದ 2ನೇ ತರಗತಿ ವಿದ್ಯಾರ್ಥಿ ಅರ್ಹಮ್ ಓಂ ತಲ್ಸಾನಿಯಾ ಗಿನ್ನೆಸ್ ವಿಶ್ವ ದಾಖಲೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾನೆ. ಇನ್ನು ವಿಚಾರವಾಗಿ ಮಾತನಾಡಿದ ಅರ್ಹಮ್, ನನ್ನ ತಂದೆ ನನಗೆ ಕೋಡಿಂಗ್ ಬಗ್ಗೆ ಕಲಿಸಿಕೊಟ್ಟಿದ್ದಾರೆ. ನಾನು 2 ವರ್ಷದವನಿದ್ದಾಗಲೇ ಟ್ಯಾಬ್ ಬಳಕೆ ಮಾಡುತ್ತಿದ್ದೆ. 3ನೇ ವಯಸ್ಸಲ್ಲಿ ಐಓಎಸ್ ಹಾಗೂ ವಿಂಡೋಸ್ನಲ್ಲಿ ಪರಣಿತಿ ಪಡೆದೆ. ಬಳಿಕ ತಂದೆಯಿಂದ ಪೈಥಾನ್ ಅಭ್ಯಾಸ ಮಾಡಿದೆ ಅಂತಾ ಅನುಭವ ಹಂಚಿಕೊಂಡಿದ್ದಾನೆ. ಮುಂದೆ ಉದ್ಯಮಿಯಾಗುವ ಕನಸು ಹೊಂದಿರುವ ಅರ್ಹಮ್, ಅಗತ್ಯವಿರುವವರಿಗೆ ಸಹಾಯ ಮಾಡುತ್ತೇನೆ ಎಂದು ಹೇಳುತ್ತಾನೆ. Gujarat: Arham Om Talsania, a Class 2 student from Ahmedabad, created Guinness World Record as World’s Youngest Computer Programmer by clearing Python programming language exam at the age of six. He says,"My father taught me coding. I started using tablets when I was 2 yrs old" pic.twitter.com/poOkKmcgAf — ANI (@ANI) November 9, 2020