alex Certify BIG NEWS: ಆನ್ಲೈನ್ ಪೋರ್ಟಲ್ ಗಳ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆನ್ಲೈನ್ ಪೋರ್ಟಲ್ ಗಳ ಕುರಿತಂತೆ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

ಆನ್​ಲೈನ್​ನಲ್ಲಿ ಪ್ರಸಾರವಾಗುವ ಚಲನಚಿತ್ರಗಳು ಹಾಗೂ ಆಡಿಯೋ ದೃಶ್ಯ ಕಾರ್ಯಕ್ರಮಗಳು ಮತ್ತು ಆನ್​​ಲೈನ್​ ಸುದ್ದಿ – ಪ್ರಸಕ್ತ ವ್ಯವಹಾರಗಳ ವಿಷಯಗಳ ಸಂಬಂಧ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಇದರ ಅನ್ವಯ ಓಟಿಟಿ ಫ್ಲಾಟ್​ಫಾರ್ಮ್​ಗಳಾದ ನೆಟ್​ಫ್ಲಿಕ್ಸ್, ಅಮೆಜಾನ್​ ಪ್ರೈಮ್, ನ್ಯೂಸ್​ ಪೋರ್ಟಲ್​​​ ಸೇರಿದಂತೆ ಇತರೆ ಡಿಜಿಟಲ್​ ವಿಷಯ ಪೂರೈಕೆದಾರರು ಇನ್ಮುಂದೆ ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನದ ವ್ಯಾಪ್ತಿಗೆ ಬರಲಿದ್ದಾರೆ,

ಆನ್​ಲೈನ್​​ ಫ್ಲಾಟ್​​ಫಾರ್ಮ್​ಗಳಲ್ಲಿ ಲಭ್ಯವಿರುವ ಚಲನ ಚಿತ್ರಗಳು ಹಾಗೂ ಕಾರ್ಯಕ್ರಮಗಳು ಇನ್ಮುಂದೆ ಭಾರತ ವ್ಯವಹಾರ ಹಂಚಿಕೆ ನಿಯಮ 1961ರ ಅಡಿಯಲ್ಲಿ ಬರಲಿದೆ.

ಓಟಿಟಿ ಫ್ಲಾಟ್​ಫಾರ್ಮ್​ಗಳ ಮೇಲೆ ನಿಗಾ ಇಡಬೇಕು ಎಂದು ಸುಪ್ರೀಂಕೋರ್ಟ್​ಗೆ ಸ್ವಾಯತ್ತ ಸಂಸ್ಥೆ ಸಲ್ಲಿಸಿದ್ದ ಪಿಐಎಲ್​ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಬಳಿಕ ಪ್ರತಿಕ್ರಿಯೆ ಕೇಳಿದ ಬೆನ್ನಲ್ಲೇ ಈ ಆದೇಶ ಹೊರಡಿಸಲಾಗಿದೆ.

ಮುಖ್ಯ ನ್ಯಾ. ಎಸ್​.ಎ. ಬೋಬ್ಡೆ ಹಾಗೂ ಎಸ್​.ಎಸ್​ ಬೋಪಣ್ಣ. ವಿ. ರಾಮಸುಬ್ರಮಣಿಯನ್​ ನೇತೃತ್ವದ ನ್ಯಾಯಪೀಠ ಕೇಂದ್ರ ಸರ್ಕಾರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಇಂಟರ್ನೆಟ್​​, ಮೊಬೈಲ್​ ಅಸೋಸಿಯೇಷನ್​ ಆಫ್​ ಇಂಡಿಯಾಗೆ ನೋಟಿಸ್​​ ನೀಡಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...