2018ರಲ್ಲಿ ವಾಟ್ಸಾಪ್ ಬಿಸಿನೆಸ್ ಅಪ್ಲಿಕೇಶನ್ ಬಿಡುಗಡೆ ಮಾಡುವಾಗ ಫೇಸ್ಬುಕ್ ಮುಂಬರುವ ದಿನಗಳಲ್ಲಿ ಶಾಪಿಂಗ್ಗೆ ಅವಕಾಶ ನೀಡುತ್ತೇವೆ ಅಂತಾ ಭರವಸೆ ನೀಡಿತ್ತು. ಇದೀಗ ತನ್ನ ಮಾತನ್ನ ಉಳಿಸಿಕೊಂಡಿರುವ ಫೇಸ್ಬುಕ್ ವಾಟ್ಸಾಪ್ ಬ್ಯುಸಿನೆಸ್ ಅಪ್ಲಿಕೇಶನ್ನಲ್ಲಿ ಶಾಪಿಂಗ್ ಬಟನ್ ಪರಿಚಯಿಸಿದೆ.
ಜನರ ಅನುಕೂಲತೆಯನ್ನ ಗಮನದಲ್ಲಿಟ್ಟುಕ್ಕೊಂಡು ವಾಟ್ಸಾಪ್ನಲ್ಲಿ ಹೊಸ ಶಾಪಿಂಗ್ ಬಟನ್ನ್ನ ಪರಿಚಯಿಸಿದ್ದೇವೆ. ಜನರು ಈ ಹಿಂದೆ ಬ್ಯುಸಿನೆಸ್ ಪ್ರೊಫೈಲ್ನಲ್ಲಿ ಕ್ಲಿಕ್ ಮಾಡಬೇಕಾಗಿತ್ತು. ಆದರೆ ಇದೀಗ ಪ್ರೊಫೈಲ್ನಲ್ಲೇ ಐಕಾನ್ ರೀತಿಯಲ್ಲಿ ಶಾಪಿಂಗ್ ಬಟನ್ ಇರಲಿದೆ. ಕೇವಲ ಒಂದು ಕ್ಲಿಕ್ನಲ್ಲಿ ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನ ಬ್ರೌಸ್ ಮಾಡಬಹುದು ಎಂದು ಕಂಪನಿ ಹೇಳಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ 175 ದಶಲಕ್ಷಕ್ಕೂ ಹೆಚ್ಚು ಜನರು ವಾಟ್ಸಾಪ್ ಬ್ಯುಸಿನೆಸ್ ಬಳಕೆ ಮಾಡ್ತಿದ್ದಾರೆ ಹಾಗೂ ಭಾರತದಲ್ಲಿ ಮೂರು ಬಿಲಿಯನ್ ಬಳಕೆದಾರರನ್ನ ವಾಟ್ಸಾಪ್ ಬಿಸಿನೆಸ್ ಹೊಂದಿದೆ.
ವಾಟ್ಸಾಪ್ನಲ್ಲಿನ ಶಾಪಿಂಗ್ ಬಟನ್ನಿಂದಾಗಿ ಬಳಕೆದಾರರು ವ್ಯವಹಾರ ನಡೆಸಲು ಅಪ್ಲಿಕೇಶನ್ನಿಂದ ಹೊರಬರಬೇಕು ಎಂದೇನಿಲ್ಲ. ನೇರವಾಗಿ ಉತ್ಪನ್ನಗಳನ್ನ ಕಾರ್ಟ್ಗೆ ಹಾಕಿಕೊಂಡು ಮೊತ್ತವನ್ನ ಬಿಸಿನೆಸ್ ಅಪ್ಲಿಕೇಶನ್ನಲ್ಲಿ ಪಾವತಿಸಬಹುದಾಗಿದೆ.