ನವದೆಹಲಿ: ಎಲ್ಲಾ ಬ್ಯಾಂಕ್ ಖಾತೆಗಳಿಗೆ ಮಾರ್ಚ್ 31, 2001 ರೊಳಗೆ ಆಧಾರ್ ಜೋಡಣೆ ಮಾಡಬೇಕೆಂದು ಕೇಂದ್ರ ಹಣಕಾಸು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ ನೀಡಿದ್ದಾರೆ.
ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್ 73 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, 2021 ರ ಮಾರ್ಚ್ 31 ರೊಳಗೆ ಎಲ್ಲ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಬೇಕಿರುವುದು ಬ್ಯಾಂಕುಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ಅವಶ್ಯಕತೆ ಇರುವ ಖಾತೆಗಳಿಗೆ ಪಾನ್ ನಂಬರ್ ಜೋಡಣೆ ಮಾಡಬೇಕು. ಪ್ರತಿಯೊಬ್ಬರ ಬ್ಯಾಂಕ್ ಖಾತೆಯನ್ನು ಆಧಾರ್ ಜೊತೆಗೆ ಲಿಂಕ್ ಮಾಡಬೇಕು. ಮಾರ್ಚ್ 31 ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದು, ಡಿಜಿಟಲ್ ಪಾವತಿಗೆ ಗ್ರಾಹಕರನ್ನು ಉತ್ತೇಜಿಸಬೇಕು. ಬ್ಯಾಂಕುಗಳು ರುಪೇ ಕಾರ್ಡ್ ಬಳಕೆಗೆ ಉತ್ತೇಜನ ನೀಡಬೇಕು. ಯುಪಿಐ ಚಾಲಿತ ವ್ಯವಸ್ಥೆ ಬಳಕೆಯಲ್ಲಿದ್ದು ಡಿಜಿಟಲ್ ಪಾವತಿಗೆ ಬ್ಯಾಂಕ್ ಗಳು ವೇದಿಕೆಯಾಗಬೇಕಿದೆ ಎಂದು ಹೇಳಿದ್ದಾರೆ.