ಉಚಿತವಾಗಿ ಫಾಸ್ಟ್ ಪುಡ್ ಪಡೆದುಕೊಳ್ಳಲು ಎಫ್ಬಿಐ ಏಜೆಂಟ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಮಹಿಳೆಯೊಬ್ಬರನ್ನು ಜಾರ್ಜಿಯಾ ಪೊಲೀಸರು ಬಂಧಿಸಿದ್ದಾರೆ.
ತನಗೆ ಕಾಂಪ್ಲಿಮೆಂಟರಿ ಮೀಲ್ಸ್ ರೂಪದಲ್ಲಿ ಬಿಟ್ಟಿಯಾಗಿ ತಿನ್ನಲು ಕೊಡದೇ ಇದ್ದಲ್ಲಿ ಬಂಧಿಸುವುದಾಗಿ ರೆಸ್ಟೋರೆಂಟ್ಗಳಲ್ಲಿ ಕೆಲಸ ಮಾಡುವ ಮಂದಿಗೆ ಈಕೆ ಬೆದರಿಕೆ ಹಾಕುತ್ತಿದ್ದಳು ಎಂದು ತಿಳಿದುಬಂದಿದೆ.
ಡಲ್ಲಾಸ್ನ ಕಿಂಬರ್ಲಿ ರಾಗ್ಸ್ಡೇಲ್ ಎಂಬ 47 ವರ್ಷದ ಮಹಿಳೆಯನ್ನು ಸರ್ಕಾರಿ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ತಿರುಗಾಡಿದ ಆಪಾದನೆ ಮೇಲೆ ಬಂಧಿಸಲಾಗಿದೆ. ಕಳೆದೊಂದು ವಾರದಿಂದ ಈಕೆ ಇದೇ ರೀತಿ ಮೂರು ಬಾರಿ ತಮ್ಮ ರೆಸ್ಟೋರೆಂಟ್ಗೆ ಬಂದಿದ್ದಾಗಿ ಚಿಕ್-ಫಿಲ್-ಎ ರೆಸ್ಟೋರೆಂಟ್ನ ಸಿಬ್ಬಂದಿ ಪೊಲೀಸರಿಗೆ ಕೊಟ್ಟ ದೂರಿನಲ್ಲಿ ತಿಳಿಸಿದ್ದಾರೆ.