ಕೋವಿಡ್-19 ಸೋಂಕಿಗೆ ಲಸಿಕೆ ಕಂಡು ಹಿಡಿಯುವ ಕಾರ್ಯಕ್ರಮ ಭರದಿಂದ ಸಾಗುತ್ತಿರುವ ಜೊತೆಯಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಜೋ ಬಿಡೆನ್ ವಿಶೇಷ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಣೆ ಮಾಡಿದ ಬೆನ್ನಲ್ಲೇ ಹೂಡಿಕೆದಾರರ ವಿಶ್ವಾಸದಲ್ಲಿ ವೃದ್ಧಿಯಾಗಿದೆ.
ಈ ಎಲ್ಲಾ ಕಾರಣಗಳಿಂದ ಮುಂಬಯಿಯ ಶೇರು ಮಾರುಕಟ್ಟೆಯಲ್ಲಿ ಮಂಗಳವಾರ ದಿನದಾರಂಭದ ವಹಿವಾಟಿನಲ್ಲಿ 500 ಸೂಚ್ಯಂಕಗಳ ಏರಿಕೆಯಾಗಿದ್ದು, ಷೇರು ಪೇಟೆಯ ಒಟ್ಟಾರೆ ಸೂಚ್ಯಂಕವು ಸಾರ್ವಕಾಲಿಕ ದಾಖಲೆಯ 43,118 ಸೂಚ್ಯಂಕಗಳನ್ನು ತಲುಪಿದೆ. ಇದೇ ವೇಳೆ ರಾಷ್ಟ್ರೀಯ ಷೇರು ಮಾರುಕಟ್ಟೆ ( ನಿಫ್ಟಿ) 12,600 ಸೂಚ್ಯಂಕಗಳನ್ನು ದಾಖಲಿಸಿದೆ.
ಸೋಮವಾರದ ವಹಿವಾಟಿನ ಅಂತ್ಯಕ್ಕೆ 704 ಸೂಚ್ಯಂಕಗಳ ಏರಿಕೆ ಕಂಡಿದ್ದ ಮುಂಬಯಿ ಷೇರು ಪೇಟೆ 42,597 ಸೂಚ್ಯಂಕಗಳೊಂದಿಗೆ ದಿನ ವಹಿವಾಟನ್ನು ಮುಗಿಸಿತ್ತು.