ಕೋವಿಡ್-19 ಸೋಂಕು ಇನ್ನೂ ಸದ್ದು ಮಾಡುತ್ತಿರುವ ನಡುವೆಯೇ ಭಾರತ ಕ್ರಿಕೆಟ್ ತಂಡಕ್ಕೆ ಆತಿಥ್ಯ ಮಾಡಲಿರುವ ಆಸ್ಟ್ರೇಲಿಯಾ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಕಳೆದ ಕೆಲವು ವಾರಗಳಿಂದ ಕೋವಿಡ್-19 ಸೋಂಕಿತರ ಸಂಖ್ಯೆ ಕಡಿಮೆಯಾಗಿರುವ ಕಾರಣ ಭಾರತ ಕ್ರಿಕೆಟ್ ತಂಡದ ವಿರುದ್ಧ ತನ್ನ ತಂಡ ಆಡುವಾಗ ಕ್ರೀಡಾಂಗಣಗಳಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರಿಗೆ ಬರಲು ಅನುವು ಮಾಡಿಕೊಡಲು ಕ್ರಿಕೆಟ್ ಆಸ್ಟ್ರೇಲಿಯಾ ಆಶಿಸುತ್ತಿದೆ.
ಕೋವಿಡ್-19 ಕಾರಣದಿಂದ ಕ್ರೀಡಾಂಗಣಗಳಲ್ಲಿ ಜನ ಸೇರುವಂತಿಲ್ಲ ಎಂಬ ನಿಯಮಾವಳಿಯಿಂದ ಸಿಎಗೆ ಮಿಲಿಯನ್ಗಟ್ಟಲೇ ಆದಾಯಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ.
ಐತಿಹಾಸಿನ ಮೆಲ್ಬರ್ನ್ ಕ್ರೀಡಾಂಗಣದ ಸಾಮರ್ಥ್ಯ ಒಂದು ಲಕ್ಷದಷ್ಟಿದ್ದರೂ ಸಹ ಡಿಸೆಂಬರ್ 26ರಂದು ನಡೆಯುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ವೇಳೆ ದಿನವೊಂದಕ್ಕೆ ಕೇವಲ 25 ಸಾವಿರ ಮಂದಿ ಮಾತ್ರವೇ ಬಂದು ಪಂದ್ಯ ವೀಕ್ಷಿಸಲು ವಿಕ್ಟೋರಿಯಾ ಪ್ರಾಂತ್ಯದ ಆಡಳಿತ ಅವಕಾಶ ಕೊಡುತ್ತಿದೆ.
ಇದೇ ನಿರ್ಬಂಧವನ್ನು ಸಿಡ್ನಿ, ಅಡಿಲೇಡ್ ಹಾಗು ಬ್ರಿಸ್ಬೇನ್ ಗಬ್ಬಾ ಕ್ರೀಡಾಂಗಣಗಳಿಗೂ ಅಲ್ಲಲ್ಲಿಯ ಪ್ರಾಂತೀಯ ಸರ್ಕಾರಗಳು ವಿಧಿಸಿವೆ.
ನವೆಂಬರ್ 27ರಿಂದ ಆಸ್ಟ್ರೇಲಿಯಾ ಪ್ರವಾಸದ ಸರಣಿಗಳನ್ನು ಭಾರತದ ಆರಂಭಿಸಲಿದೆ. ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೂರು ಏಕದಿನ ಪಂದ್ಯಗಳು, ಮೂರು ಟಿ-20 ಪಂದ್ಯಗಳು ಹಾಗೂ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಭಾರತ ಭಾಗಿಯಾಗಲಿದೆ.