ಮೆಸ್ಸೇಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ಶುಕ್ರವಾರ ಗ್ರಾಹಕರಿಗೆ ಯುಪಿಐ ಪಾವತಿ ಸೇವೆ ಶುರು ಮಾಡಿದೆ. ಭಾರತದಾದ್ಯಂತ ವಾಟ್ಸಾಪ್ ಬಳಕೆದಾರರು ಇದ್ರ ಮೂಲಕ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಸಹಭಾಗಿತ್ವದಲ್ಲಿ ವಾಟ್ಸಾಪ್ ಈ ಪಾವತಿ ವೈಶಿಷ್ಟ್ಯವನ್ನು ವಿನ್ಯಾಸಗೊಳಿಸಿದೆ. ವಾಟ್ಸಾಪ್ ನಲ್ಲಿ ಹಣ ಕಳುಹಿಸಲು ಬಳಕೆದಾರರು ಭಾರತದಲ್ಲಿ ಬ್ಯಾಂಕ್ ಖಾತೆ ಮತ್ತು ಡೆಬಿಟ್ ಕಾರ್ಡ್ ಹೊಂದಿರಬೇಕು. ಹತ್ತು ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಈ ಸೇವೆ ಲಭ್ಯವಿದೆ.
ಮೊದಲು ವಾಟ್ಸಾಪ್ ಅಪ್ಲಿಕೇಷನ್ ಓಪನ್ ಮಾಡಬೇಕು. ಮೂರು ಚುಕ್ಕೆಗಳಿರುವ ಐಕಾನ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಪೇಮೆಂಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಬ್ಯಾಂಕ್ ಪಟ್ಟಿ ಕಾಣಿಸಿಕೊಳ್ಳುತ್ತದೆ. ವಾಟ್ಸಾಪ್ ಫೋನ್ ನಂಬರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಬ್ಯಾಂಕ್ ಮಾತ್ರ ನೀವು ಆಯ್ದುಕೊಳ್ಳಬಹುದು. ಈಗಾಗಲೇ ಯುಪಿಐ ಖಾತೆಯನ್ನು ಹೊಂದಿದ್ದರೆ, ಅಪ್ಲಿಕೇಶನ್ ಯುಪಿಐ ಪಿನ್ ಕೇಳುತ್ತದೆ. ಇಲ್ಲದಿದ್ದರೆ ಡೆಬಿಟ್ ಕಾರ್ಡ್ ನ ಕೊನೆಯ 6 ಅಂಕೆಗಳು ಮತ್ತು ಮುಕ್ತಾಯ ದಿನಾಂಕವನ್ನು ಸೇರಿಸಬೇಕು. ಇಲ್ಲಿಗೆ ಬ್ಯಾಂಕ್ ಲಿಂಕ್ ಕೆಲಸ ಮುಗಿಯುತ್ತದೆ.
ಹಣ ವರ್ಗಾವಣೆಗೆ ವಾಟ್ಸಾಪ್ ಚಾಟ್ ತೆರೆಯಬೇಕು. ಅಲ್ಲಿ ಪೇಮೆಂಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ, ಮೊತ್ತವನ್ನು ನಮೂದಿಸಬೇಕು. ಮೊತ್ತ ನಮೂದಿಸಿದ ನಂತ್ರ ಕಳುಹಿಸುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಸುರಕ್ಷತೆಗಾಗಿ ಯುಪಿಐ ಪಿನ್ ನಮೂದಿಸಬೇಕು. ನಂತ್ರ ಹಣ ವರ್ಗಾಯಿಸಬೇಕು.
ವಾಟ್ಸಾಪ್ ನಲ್ಲಿ ಕ್ಯೂಆರ್ ಕೋಡ್ ಮೂಲಕ ಹಣವನ್ನು ಕಳುಹಿಸುವುದಾದ್ರೆ, ಪೇಮೆಂಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನ್ಯೂ ಪೇಮೆಂಟ್ ಗೆ ಹೋಗಿ. ಕ್ಯೂಆರ್ ಕೋಡ್ ಆಯ್ಕೆ ಮಾಡಿ. ಸ್ವೀಕರಿಸುವವರ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ. ನಂತ್ರ ಮೊತ್ತವನ್ನು ನಮೂದಿಸಿ. ಯುಪಿಐ ಪಿನ್ ನಮೂದಿಸಿ ಮತ್ತು ಪಾವತಿ ಮಾಡಿ.