alex Certify ಇಂದು ವಿಶ್ವ ಹೃದಯ ದಿನ: ನಿಮಗೆ ಹೃದಯದ ಸಮಸ್ಯೆ ಇದ್ದರೆ ಈ 5 ಲಕ್ಷಣಗಳು ಕಾಣಿಸಿಕೊಳ್ಳುತ್ತದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ವಿಶ್ವ ಹೃದಯ ದಿನ: ನಿಮಗೆ ಹೃದಯದ ಸಮಸ್ಯೆ ಇದ್ದರೆ ಈ 5 ಲಕ್ಷಣಗಳು ಕಾಣಿಸಿಕೊಳ್ಳುತ್ತದೆ

Heart Problems Ayurvedic Treatment in Pune,Mumbai

ಹೃದಯವು ದೇಹದ ಅತ್ಯಂತ ಸೂಕ್ಷ್ಮವಾದ ಭಾಗ. ಇದು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದರೆ ವ್ಯಕ್ತಿ ಸಾಯುತ್ತಾನೆ. ಆದಕಾರಣ ಹೃದಯದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಹೆಚ್ಚಾಗಿ ಹೃದಯಾಘಾತದ ಸಮಸ್ಯೆ 45 ವರ್ಷದ ನಂತರ ಕಂಡು ಬರುತ್ತದೆ. ಆದರೆ ಅದಕ್ಕೆ ಸಂಬಂಧಪಟ್ಟ ಲಕ್ಷಣಗಳು 30 ವರ್ಷದ ನಂತರ ಕಾಣಿಸಿಕೊಳ್ಳುತ್ತದೆ. ಅದು ಯಾವುದು ಎಂಬುದನ್ನು ತಿಳಿದು ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿ.

*ಕೆಲವರಿಗೆ ಎದೆ ನೋವು ಕಾಡಲು ಶುರುವಾಗುತ್ತದೆ. ಆದರೆ ಕೆಲವರು ಅದನ್ನು ಆಸಿಡಿಟಿ ಸಮಸ್ಯೆಯಿಂದ ಬರುತ್ತದೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಎದೆನೋವು ಕಾಣಿಸಿಕೊಂಡಾಗ ನೀವು ತುಂಬಾ ಬೆವರಲು ಶುರು ಮಾಡಿದರೆ ನಿಮ್ಮ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಿ.

*30ನೇ ವಯಸ್ಸಿನ ನಂತರ ಮೆಟ್ಟಿಲು ಹತ್ತುವಾಗ ಅಥವಾ ಭಾರವಾದ ಕೆಲಸಗಳನ್ನು ಮಾಡುವಾಗ ತುಂಬಾ ದಣಿವಾದರೆ, ಉಸಿರಾಡಲು ಕಷ್ಟಕರವಾದರೆ ಇದು ಹೃದಯದ ಸಮಸ್ಯೆಯ ಸೂಚನೆ.

*30-35ನೇ ವಯಸ್ಸಿಗೆ ನಿದ್ರೆ ಮಾಡುವಾಗ ಗೊರಕೆ ಸಮಸ್ಯೆ ಕಾಡುತ್ತಿದ್ದರೆ ಇದು ಉಸಿರಾಟದ ತೊಂದರೆ. ಇದರರ್ಥ ನಿಮ್ಮ ಹೃದಯ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಸೂಚನೆ.

*ಕೆಲವರಿಗೆ ದವಡೆ ನೋವು ಕಾಡುತ್ತದೆ. ಅದನ್ನು ಹಲ್ಲಿ ನ ಸಮಸ್ಯೆ ಎಂದು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದು ಕೂಡ ಹೃದಯದ ತೊಂದರೆಗಳಲ್ಲಿ ಒಂದಾಗಿದೆ.

*ಕೊಲೆಸ್ಟ್ರಾಲ್ ಕೂಡ ಹೃದಯದ ಸಮಸ್ಯೆಗೆ ಒಂದು ಕಾರಣವಾಗಿದೆ. ಕೊಲೆಸ್ಟ್ರಾಲ್ ತುಂಬಾ ಹೆಚ್ಚಾಗಿದ್ದರೆ ರಕ್ತ ಸಂಚಾರ ತಡೆಯಾಗಿ ದೇಹದ ಕೆಲವು ಭಾಗಗಳಲ್ಲಿ ನಿರಂತರವಾಗಿ ಜುಮ್ಮೆನಿಸುವಂತಹ ಸಮಸ್ಯೆ ಕಾಡುತ್ತದೆ. ಇದು ಕೂಡ ಹೃದಯದ ಸಮಸ್ಯೆಯ ಪೂರ್ವ ಸೂಚನೆಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...