ನ್ಯಾಷನಲ್ ಕಾಮನ್ ಮೊಬಿಲಿಟಿ ಡೆಬಿಟ್ ಕಾರ್ಡನ್ನು ಕರ್ನಾಟಕ ಬ್ಯಾಂಕ್ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ಒನ್ ನೇಷನ್ ಒನ್ ಕಾರ್ಡ್ ಆಶಯದಂತೆ ಕಾರ್ಡ್ ಬಿಡುಗಡೆ ಮಾಡಲಾಗಿರುವ ಈ ಕಾರ್ಡ್ ಅನ್ನು ಜಗತ್ತಿನಾದ್ಯಂತ ಬಳಸಬಹುದಾಗಿದೆ.
ಸ್ಪರ್ಶ ರಹಿತವಾದ ಪ್ರಿಪೇಯ್ಡ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಇದಾಗಿದ್ದು, ವಿಶೇಷವಾಗಿ ರೂಪಿಸಲಾಗಿದೆ. ಸ್ವೈಪ್ ಮಾಡದೆ ಕಾರ್ಡ್ ಬಳಸಬಹುದಾಗಿದೆ. ಮೆಟ್ರೋ ನಿಲ್ದಾಣ, ಟೋಲ್ ಪ್ಲಾಜಾ, ಪಾರ್ಕಿಂಗ್, ಮಳಿಗೆಗಳಲ್ಲಿ ಕಾರ್ಡ್ ಬಳಸಬಹುದು. ಚಿಪ್ ಆಧಾರಿತ ಕಾರ್ಡ್ ಬಳಸುವ ಮೂಲಕ ಇಂಟರ್ನೆಟ್ ಇಲ್ಲದೇ ಸಣ್ಣ ಪುಟ್ಟ ವ್ಯವಹಾರ ಮಾಡಬಹುದಾಗಿದೆ.
ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಅವರು ಕಾರ್ಡ್ ಬಿಡುಗಡೆ ಮಾಡಿ ಮಾತನಾಡಿ, ಬದಲಾವಣೆಗನುಗುಣವಾಗಿ ಆಕರ್ಷಕ ಕಾರ್ಡ್ ರೂಪಿಸಲಾಗಿದೆ. ಟ್ಯಾಪ್ ಅಂಡ್ ಗೋ, ಆಫ್ ಲೈನ್ ಪೇಮೆಂಟ್ ನಂತಹ ಸೌಲಭ್ಯಗಳು ಇವೆ ಎಂದು ತಿಳಿಸಿದ್ದಾರೆ.