
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಡೆಮಾಕ್ರಾಟಿಕ್ ಅಭ್ಯರ್ಥಿ ಜೋ ಬಿಡೆನ್ ಗೆಲುವಿಗೆ ಜಗತ್ತಿನಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಇದೇ ಭರದಲ್ಲಿ ಪಂಜಾಬ್ನ ಅಮೃತಸರದ ಕಲಾವಿದರೊಬ್ಬರು ಅಮೆರಿಕದ ಎಲ್ಲ 46 ಅಧ್ಯಕ್ಷರ ತೈಲ ಚಿತ್ರಗಳನ್ನು ಬಿಡಿಸಿದ್ದಾರೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಜಗಜೋತ್ ಸಿಂಗ್ ರುಬಾಲ್ ತಮ್ಮ ಈ ಕಲಾಕೃತಿಯನ್ನು ರಚಿಸಿದ್ದಾರೆ.
ಕಳೆದ 230 ವರ್ಷಗಳಿಂದ ಅಮೆರಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿರುವ — ಜಾರ್ಜ್ ವಾಶಿಂಗ್ಟನ್ರಿಂದ ಜೋ ಬಿಡೆನ್ ವರೆಗೂ — ನಾಯಕರ ಚಿತ್ರಗಳನ್ನು ಬರೆದಿದ್ದಾರೆ ರುಬಾಲ್.
ತಮ್ಮ ಈ ಪರಿಶ್ರಮದ ಫಲವನ್ನು ಅಮೆರಿಕದ ಯಾವುದಾದರೂ ಕಲಾ ಗ್ಯಾಲರಿ ಅಥವಾ ಶ್ವೇತಭವನದ ಅಂಗಳದಲ್ಲಿ ನೋಡಲು ಇಷ್ಟ ಪಡುವುದಾಗಿ ರುಬಾಲ್ ಹೇಳಿಕೊಂಡಿದ್ದಾರೆ.