ವಿಪರೀತ ಪರಿಸರ ಮಾಲಿನ್ಯದಿಂದಾಗಿ ರಷ್ಯಾದ ನದಿಯೊಂದು ಬೀಟ್ರೂಟ್ ಬಣ್ಣಕ್ಕೆ ತಿರುಗಿದೆ. ನೀರಿನಲ್ಲಿ ವಿಷಕಾರಿ ಅಂಶ ಸೇರಿಕೊಂಡಿರೋದ್ರಿಂದ ಬಾತುಕೋಳಿಗಳೂ ಸಹ ಈ ನೀರಿನಲ್ಲಿ ಈಜಾಡೋದನ್ನ ನಿಲ್ಲಿಸಿವೆ ಅಂತಾ ಸ್ಥಳೀಯರು ಹೇಳಿದ್ದಾರೆ.
ಇಸ್ಕಿಟಿಮ್ಕಾ ಎಂಬ ಹೆಸರಿನ ಈ ನದಿ ಸಂಪೂರ್ಣವಾಗಿ ತನ್ನ ಬಣ್ಣವನ್ನ ಬೀಟ್ರೂಟ್ ಕೆಂಪು ಬಣ್ಣಕ್ಕೆ ಬದಲಾಗಿದೆ. ಅಧಿಕಾರಿಗಳು ಯಾವ ರಾಸಾಯನಿಕದಿಂದಾಗಿ ನದಿ ನೀರು ಈ ನಿರ್ದಿಷ್ಟ ಬಣ್ಣಕ್ಕೆ ತಿರುಗಿದೆ ಅಂತಾ ಸಂಶೋಧನೆ ನಡೆಸುತ್ತಿದ್ದಾರೆ. ಟ್ವಿಟರ್ನಲ್ಲಿ ನದಿಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.
https://twitter.com/mudakoff/status/1324683004711751684