ಕೇಂದ್ರ ಹಡಗು ಸಚಿವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮರುನಾಮಕರಣ ಮಾಡಿದ್ದಾರೆ. ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಸೂರತ್ ಬಳಿಯಿರುವ ಹಜೀರಾ ಮತ್ತು ಭಾವನಗರದ ಘೋಘಾ ಪಟ್ಟಣದ ನಡುವೆ ಜಲ ಮಾರ್ಗ ಕಲ್ಪಿಸುವ ರೋ-ಪ್ಯಾಕ್ಸ್ ಹಡಗು ಸೇವೆಗೆ ಚಾಲನೆ ನೀಡಿದರು.
ಈ ವೇಳೆ ನೌಕಾಯಾನ ಸಚಿವಾಲಯಕ್ಕೆ, ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಎಂದು ಮರುನಾಮಕರಣ ಮಾಡುವ ಜೊತೆಗೆ ಈ ಸಚಿವಾಲಯವನ್ನು ವಿಸ್ತರಿಸಲಾಗುತ್ತಿದೆ ಎಂದು ಹೇಳಿದರು. ಇದೇ ವೇಳೆ ಹೆಸರಿನಲ್ಲಿ ಸರಿಯಾದ ಸ್ಪಷ್ಟತೆ ಇದ್ದರೆ, ಕೆಲಸದಲ್ಲೂ ಅದೇ ಸ್ಪಷ್ಟತೆ ಇರುತ್ತೆ ಎಂದರು.
ಇನ್ನು, ದೇಶವನ್ನು ಆತ್ಮನಿರ್ಭರ ಭಾರತವನ್ನಾಗಿಸುವಲ್ಲಿ ಸಮುದ್ರ ಪ್ರದೇಶಗಳ ಪಾತ್ರ ದೊಡ್ಡದಿದೆ. ಇವುಗಳ ಮಹತ್ವ ಹೆಚ್ಚಿದೆ ಎಂದರು. ಈ ನಿಟ್ಟಿನಲ್ಲಿ ಸಿದ್ದತೆಗಳು ಕೂಡ ಮುಂದುವರೆದಿವೆ ಎಂದರು. ಮುಂದಿನ ದಿನಗಳಲ್ಲಿ ಸಮುದ್ರ ಮಾರ್ಗ ಉದ್ಯಮಿಗಳಿಗೆ ನೆರವಾಗಲಿದೆ ಅಂತಾ ಕೇಂದ್ರ ಬಂದರು ಖಾತೆ ಸಚಿವ ಮನ್ಸುಕ್ ಮಾಂಡವೀಯ ತಿಳಿಸಿದ್ದಾರೆ.