ಮುಂಬೈ: ಅಮೆರಿಕಾ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬಿಡೆನ್ ಅವರಿಗೆ ವಿಶ್ವಾದ್ಯಂತ ಅಭಿನಂದನೆ ತಿಳಿಸುತ್ತಿದ್ದಾರೆ. ಈ ನಡುವೆ ಬಾಲಿವುಡ್ ನಟಿ ಕಂಗನಾ ರಣಾವತ್ ಜೋ ಬಿಡೆನ್ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಜೋ ಬಿಡೆನ್ ಗೆ ಪ್ರತಿ 5 ನಿಮಿಷಕ್ಕೆ ಅವರ ಡೇಟಾ ಕ್ರ್ಯಾಶ್ ಆಗುತ್ತೆ. ಅವರಿಗೆ ನೀಡುತ್ತಿರುವ ಔಷಧಿ ನೋಡಿದರೆ ಅವರು ಒಂದು ವರ್ಷಕ್ಕಿಂತ ಹೆಚ್ಚು ಮುಂದುವರೆಯಲ್ಲ. ಜೋ ಬಿಡೆನ್ ಗಜನಿ ಬಿಡೆನ್ ಎಂದು ಹೇಳುವ ಮೂಲಕ ಬಿಡೆನ್ ರನ್ನು ಗಜನಿಗೆ ಹೋಲಿಸಿದ್ದಾರೆ ಕಂಗನಾ.
ಅಲ್ಲದೇ ಇನ್ನು ಸಂಪೂರ್ಣ ಶೋ ನಡೆಸುವುದು ಕಮಲಾ ಹ್ಯಾರಿಸ್. ಓರ್ವ ಮಹಿಳೆ ಮೇಲೆ ಬಂದಾಗ ಎಲ್ಲಾ ಮಹಿಳೆಯರಿಗೂ ದಾರಿ ತೋರಿಸುತ್ತಾಳೆ. ಈ ಐತಿಹಾಸಿಕ ದಿನವನ್ನು ಸಂಭ್ರಮಿಸೋಣ ಎಂದು ಹೇಳಿದ್ದಾರೆ.