alex Certify ನಾನು ಸಹಾಯ ಮಾಡಿದ್ದೇ ತಪ್ಪಾಯ್ತು ಎಂದ ಗೌರವ್​ ವಾಸನ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾನು ಸಹಾಯ ಮಾಡಿದ್ದೇ ತಪ್ಪಾಯ್ತು ಎಂದ ಗೌರವ್​ ವಾಸನ್​

ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿದ ವಿಡಿಯೋದಿಂದಾಗಿ ಫೇಮಸ್​ ಆಗಿದ್ದ ಬಾಬಾ ಕಾ ಡಾಬಾ ಇದೀಗ ವಿಚಿತ್ರ ತಿರುವುಗಳನ್ನ ಪಡೆದುಕೊಳ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೊ ಹರಿಬಿಟ್ಟಿದ್ದ ಯೂ ಟ್ಯೂಬರ್​ ಗೌರವ್​ ವಾಸನ್​​ ವಿರುದ್ಧವೇ ಬಾಬಾ ಕಾ ಡಾಬಾ ಮಾಲೀಕ ಕಾಂತಾ ಪ್ರಸಾದ್​ ದೂರು ದಾಖಲಿಸಿರೋದು ಎಲ್ಲರಿಗೂ ತಿಳಿದಿರುವ ವಿಷಯ.

ತನ್ನ ವಿರುದ್ಧ ಹೇರಲಾಗಿರುವ ವಂಚನೆ ಆರೋಪದ ವಿರುದ್ಧ ಮಾತನಾಡುತ್ತಾ ಗೌರವ್​ ವಾಸನ್​ ಭಾವುಕರಾಗಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ರೇಡಿಯೋ ಚಾನೆಲ್​ವೊಂದರ ಸಂದರ್ಶನದಲ್ಲಿ ಭಾಗಿಯಾಗಿದ್ದ ಗೌರವ್​, ನಾನು ಅವರನ್ನ ನನ್ನ ತಂದೆ – ತಾಯಿ ಎಂದುಕೊಂಡು ಸಹಾಯ ಮಾಡಿದೆ. ಆದರೆ ಇದೀಗ ನನ್ನ ಮೇಲೆ ಆರೋಪ ಹೊರಿಸಲಾಗಿದೆ. ಬಹುಶಃ ಇದೇ ಭಯದಿಂದಲೇ ಜಗತ್ತಿನ ಅನೇಕರು ಇನ್ನೊಬ್ಬರಿಗೆ ಸಹಾಯ ಹಸ್ತ ಚಾಚೋಕೆ ಹಿಂಜರಿಯುತ್ತಾರೆ ಅಂತಾ ಹೇಳಿ ಕಣ್ಣೀರು ಹಾಕಿದ್ರು.

ಈ ವಿಡಿಯೋ ವೈರಲ್​ ಆಗ್ತಿದ್ದಂತೆ ಬಹುತೇಕ ನೆಟ್ಟಿಗರು ಗೌರವ್​ ವಾಸನ್​ ಪರ ಬೆಂಬಲ ಸೂಚಿಸಿದ್ದಾರೆ .

— Sayema (@_sayema) November 6, 2020

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...