alex Certify ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ: ಕೆಲವೇ ಕ್ಷಣಗಳಲ್ಲಿ 2 ಲಕ್ಷ ಕೋಟಿ ರೂ. ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ: ಕೆಲವೇ ಕ್ಷಣಗಳಲ್ಲಿ 2 ಲಕ್ಷ ಕೋಟಿ ರೂ. ಲಾಭ

Sensex settles 523 points higher, Nifty above 10,200; RIL hits record high

ಅಮೆರಿಕಾ ಅಧ್ಯಕ್ಷರಾಗಿ ಜೋ ಬಿಡನ್ ಜಯಗಳಿಸಿದ ನಂತ್ರ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹುರುಪು ಕಂಡು ಬಂದಿದೆ.

ವಾರದ ಮೊದಲ ವಹಿವಾಟಿನ ದಿನವಾದ ಸೋಮವಾರ, 30-ಷೇರುಗಳ ಸೆನ್ಸೆಕ್ಸ್ ಸೂಚ್ಯಂಕ 600 ಪಾಯಿಂಟ್‌ಗಳ ಏರಿಕೆ ಕಂಡು 42500 ಅಂಕಗಳ ಜೊತೆ ವಹಿವಾಟು ನಡೆಸುತ್ತಿದೆ. 50-ಷೇರುಗಳ ನಿಫ್ಟಿ 12430 ಅಂಕದಲ್ಲಿ ವಹಿವಾಟು ನಡೆಸುತ್ತಿದೆ.

ಆರಂಭದಲ್ಲಿಯೇ ಷೇರು ಮಾರುಕಟ್ಟೆಯಲ್ಲಿ ಕಂಡ ಏರಿಕೆಯಿಂದಾಗಿ ಹೂಡಿಕೆದಾರರು ಕೆಲವೇ ನಿಮಿಷಗಳಲ್ಲಿ 2 ಲಕ್ಷ ಕೋಟಿ ರೂಪಾಯಿ ಲಾಭ ಗಳಿಸಿದ್ದಾರೆ. ಸೋಮವಾರ ಮಾರುಕಟ್ಟೆ ಪ್ರಾರಂಭವಾದ ನಂತರ ಬಿಎಸ್‌ಇ ಮಾರುಕಟ್ಟೆ ಕ್ಯಾಪ್ 1,65,45,013.79 ಕೋಟಿ ರೂಪಾಯಿಗೆ ತಲುಪಿದೆ. ಶುಕ್ರವಾರ ಇದು 1,63,60,699.17 ಕೋಟಿ ರೂಪಾಯಿಯಿತ್ತು.

ಐಸಿಐಸಿಐ ಬ್ಯಾಂಕ್ ಶೇಕಡಾ 3.90 ರಷ್ಟು ಲಾಭ ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದೆ. ಭಾರ್ತಿ ಏರ್ಟೆಲ್, ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಪವರ್ ಗ್ರಿಡ್, ಇನ್ಫೋಸಿಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್ ಫೈನಾನ್ಸ್, ಕೊಟಕ್ ಬ್ಯಾಂಕ್, ಎಚ್‌ಯುಎಲ್, ಟೆಕ್ ಮಹೀಂದ್ರಾ, ಟಾಟಾ ಸ್ಟೀಲ್, ಎನ್‌ಟಿಪಿಸಿ, ಎಚ್‌ಡಿಎಫ್‌ಸಿ, ಎಲ್‌ಟಿ, ಎಸ್‌ಬಿಐ, ಟಿಸಿಎಸ್,  ಒಎನ್‌ಜಿಸಿ ಷೇರುಗಳ ವೇಗ ಹೆಚ್ಚಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...