ಮುಂಬೈ: ಐಪಿಎಲ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಮಾಜಿ ರಣಜಿ ಆಟಗಾರ ರಾಬಿನ್ ಮೊರಿಸ್ ಸೇರಿದಂತೆ ಮೂವರನ್ನು ವರ್ಸೊವಾ ಪೊಲೀಸರು ಬಂಧಿಸಿದ್ದಾರೆ.
ರಾಬಿನ್ ಮೊರಿಸ್ ತನ್ನ ಫ್ಲಾಟ್ ನಲ್ಲೇ ಬೆಟ್ಟಿಂಗ್ ದಂಧೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ರಾಬಿನ್, ಧಿರೇಂದ್ರ ಕುಲ್ಕರ್ಣಿ ಹಾಗೂ ರೋಹಿತ್ ಬಾಬು ಎಂಬುವವರನ್ನು ಬಂಧಿಸಿದ್ದಾರೆ.
ಮೂವರು ಆರ್ ಸಿಬಿ ಹಾಗೂ ಎಸ್ಆರ್ ಹೆಚ್ ನಡುವಿನ ಪಂದ್ಯದಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದರು. ಬಂಧಿತರಿಂದ 9000 ರೂ ನಗದು, ಹಲವು ಮೊಬೈಲ್ ಫೋನ್, ಎರಡು ಟ್ಯಾಬ್ ಗಳನ್ನು ವಶಕ್ಕೆ ಪಡೆದಿದ್ದಾರೆ.