ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಮಹಿಳೆಯರಲ್ಲಿ ಅಂಡಾಶಯದ ಕ್ಯಾನ್ಸರ್ ಕಂಡುಬರುತ್ತದೆ. ಇದರಿಂದ ಸಾವು ಸಂಭವಿಸಬಹುದು.
ಅಂಡಾಶಯದ ಕ್ಯಾನ್ಸರ್ ನಿಂದ ಪಾರಾಗಲು ಈ ಆಹಾರಗಳನ್ನು ಸೇವಿಸಿ.
ಅಣಬೆಗಳು : ಇದರಲ್ಲಿರುವ ಪೋಷಕಾಂಶಗಳು ಕ್ಯಾನ್ಸರ್ ಬೆಳವಣೆಗೆಯನ್ನು ತಡೆಯುತ್ತದೆ.
ಸೋಯಾ ಉತ್ಪನ್ನಗಳು : ಸೋಯಾ ಉತ್ಪನ್ನದಲ್ಲಿರುವ ಅಂಶಗಳು ಕ್ಯಾನ್ಸರ್ ಕೋಶಗಳ ಹರಡುವಿಕೆಯನ್ನು ತಡೆಯುತ್ತದೆ.
ಪುದೀನಾ ಚಹಾ: ಅಂಡಾಶಯದ ಕ್ಯಾನ್ಸರ್ ನಿಂದ ಹೊಟ್ಟೆಯ ಸಮಸ್ಯೆ ಕಾಡುತ್ತಿದ್ದರೆ ಪುದೀನಾ ಚಹಾ ಸೇವಿಸಿದರೆ ಅದನ್ನು ನಿವಾರಿಸಬಹುದು.
ಕೆಂಪು ಈರುಳ್ಳಿ : ಇದು ಕ್ಯಾನ್ಸರ್ ವಿರೋಧಿ ಸಂಯುಕ್ತಗಳನ್ನು ಹೊಂದಿದೆ. ಇದು ಕ್ಯಾನ್ಸರ್ ರೋಗದಿಂದ ಉಂಟಾಗುವ ಸಮಸ್ಯೆಯನ್ನು ನಿವಾರಿಸುತ್ತದೆ.
ಶುಂಠಿ : ಇದು ಕ್ಯಾನ್ಸರ್ ವಿರೋಧಿ ಚಟುವಟಿಕೆಯನ್ನು ಹೊಂದಿರುತ್ತದೆ. ಇದರಿಂದಾಗಿ ಕ್ಯಾನ್ಸರ್ ರೂಪಾಂತರಗೊಳ್ಳುವುದನ್ನು ತಡೆಯುತ್ತದೆ.