alex Certify ಅಮೆರಿಕಾ ನೂತನ ಅಧ್ಯಕ್ಷ ಬಿಡೆನ್ ಪತ್ನಿ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾ ನೂತನ ಅಧ್ಯಕ್ಷ ಬಿಡೆನ್ ಪತ್ನಿ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ

ನ್ಯೂಯಾರ್ಕ್: ಅಮೆರಿಕಾ ಸಂಯುಕ್ತ ಸಂಸ್ಥಾನದ ನೂತನ ಅಧ್ಯಕ್ಷರಾಗಿ ಜೋ ಬಿಡೆನ್ ಹೆಸರು ಘೋಷಣೆಯಾಗುತ್ತಿದ್ದಂತೆ ಅವರ ಪತ್ನಿ ಜಿಲ್ ಬಿಡನ್ ಕೂಡ ಸಂಭ್ರಮಾಚರಣೆ ಮಾಡಿದ್ದಾರೆ. 69 ವರ್ಷದ ಜಿಲ್ ಅವರು ಜೋ ಬಿಡೆನ್ ಚುನಾವಣಾ ಪ್ರಚಾರದಲ್ಲೂ ಮಹತ್ವದ ಪಾತ್ರ ವಹಿಸಿದ್ದರು.

ಜಿಲ್ ಅವರು ತಮ್ಮ ಪತಿಯ ಕೈ ಹಿಡಿದುಕೊಂಡು ಇನ್ನೊಂದು ಕೈಯನ್ನು ಜನರತ್ತ ಬೀಸುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ‘ಅವರು (ಜೋ ಬಿಡನ್) ನಮ್ಮ ಎಲ್ಲರ ಕುಟುಂಬದ ಅಧ್ಯಕ್ಷರಾಗಲಿದ್ದಾರೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ.

ಇನ್ನೊಂದು ಫೋಟೋದಲ್ಲಿ ಬಿಡೆನ್ ಅವರು ಒಂದು ಫಲಕ ಹಿಡಿದಿದ್ದು, ಅದರಲ್ಲಿ ಡಾ. ಮತ್ತು ವೈಸ್ ಪ್ರೆಸಿಡೆಂಟ್ ಬಿಡೆನ್ ಇಲ್ಲಿರುತ್ತಾರೆ ಎಂದು ಬರೆದಿದೆ. ಪಕ್ಕದಲ್ಲಿ ನಿಂತ ಜಿಲ್ ಅವರು ವೈಸ್ ಎಂಬ ಪದವನ್ನು ತಮ್ಮ ಕೈಯ್ಯಿಂದ ಮುಚ್ಚಿ ಹಿಡಿದಿದ್ದಾರೆ.

ಜಿಲ್ ಬಿಡನ್ ಅವರು ಇಂಗ್ಲಿಷ್ ಪ್ರೊಫೆಸರ್. ನಾಲ್ಕು ಪದವಿ ಪಡೆದಿದ್ದಾರೆ. ಶಿಕ್ಷಣದಲ್ಲಿ ಡಾಕ್ಟರೇಟ್ ಮಾಡಿಕೊಂಡಿದ್ದಾರೆ. ಮೊದಲ ಫ್ಲೋಟಸ್‌ನಲ್ಲಿ ಕಲಿಸುತ್ತಿದ್ದ ಅವರು ಈಗ ಉತ್ತರ ವರ್ಜೀನಿಯಾದ ಕಮ್ಯುನಿಟಿ ಕಾಲೇಜ್‌ನಲ್ಲಿ ಪ್ರೊಫೆಸರ್ ಆಗಿದ್ದಾರೆ. ಜೋ ಹಾಗೂ ಜಿಲ್ ಅವರು 1977 ರ ಜೂನ್ 17 ರಂದು ನ್ಯೂಯಾರ್ಕ್‌ನಲ್ಲಿ ವಿವಾಹವಾಗಿದ್ದರು. ದಂಪತಿಗೆ 1981 ರಲ್ಲಿ ಅಶ್ಲೀ ಬ್ಲಾಝರ್ ಎಂಬ ಮಗಳು ಜನಿಸಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...