ನವದೆಹಲಿ: ವೈದ್ಯಕೀಯ ಸಮಾಲೋಚನಾ ಸಮಿತಿ(ಎಂಸಿಸಿ) 2020 ರ ಕೌನ್ಸೆಲಿಂಗ್ ಮೊದಲ ಸುತ್ತಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಏಮ್ಸ್ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಲು ಅಂತಿಮ ದಿನಾಂಕವನ್ನು ವಿಸ್ತರಿಸಿದೆ.
ನವೆಂಬರ್ 14 ರ ವರೆಗೆ ಅಭ್ಯರ್ಥಿಗಳು ಸಂಬಂಧಿತ ಸಂಸ್ಥೆಗಳಲ್ಲಿ ವರದಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಮೊದಲು ನೀಟ್ ಕೌನ್ಸೆಲಿಂಗ್ -2020 ರ ಮೊದಲ ಸುತ್ತಿನ ಫಲಿತಾಂಶದ ನಂತರ ವೈದ್ಯಕೀಯ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಲು ನವೆಂಬರ್ 12 ರವರೆಗೆ ಅವಕಾಶ ನೀಡಲಾಗಿತ್ತು.
ಅಭ್ಯರ್ಥಿಗಳು ವರದಿ ಮಾಡಿಕೊಳ್ಳಲು ಇರುವ ಸಂಸ್ಥೆಗಳ ಪಟ್ಟಿಯನ್ನು ಎಂಸಿಸಿ ಬಿಡುಗಡೆ ಮಾಡಿದೆ. ಏಮ್ಸ್ ಗುವಾಹಟಿ, ಬಿಲಾಸ್ಪುರ ಮತ್ತು ಜಮ್ಮುವಿನಲ್ಲಿ ಪ್ರವೇಶ ಪಡೆಯುವವರಿಗೆ ನವೆಂಬರ್ 14 ರವರೆಗೆ ಅವಕಾಶ ಇದೆ. ನೀಟ್ ಕೌನ್ಸೆಲಿಂಗ್ 2020 ರ ಮೊದಲ ಸುತ್ತಿನ ಫಲಿತಾಂಶವನ್ನು ನವೆಂಬರ್ 6 ರಂದು ಎಂಸಿಸಿ ಪ್ರಕಟಿಸಿದೆ. ಹಂಚಿಕೆಯಾದ ಕಾಲೇಜುಗಳಲ್ಲಿ ನವೆಂಬರ್ 14 ರವರೆಗೆ ಪ್ರವೇಶ ಪಡೆಯಲು ದಿನಾಂಕ ವಿಸ್ತರಿಸಲಾಗಿದೆ ಎಂದು ಹೇಳಲಾಗಿದೆ.