ದಾವಣಗೆರೆ: ಕೋವಿಡ್ 19 ಸಾಂಕ್ರಾಮಿಕ ರೋಗದ ಪ್ರಸ್ತುತ ಪರಿಸ್ಥಿತಿಯಲ್ಲಿ ಜನಸಂದಣಿಯನ್ನು ತಪ್ಪಿಸಲು ಮತ್ತು ಎಲ್ಲಾ ಪಿಂಚಣಿದಾರರು ಹಿರಿಯ ನಾಗರೀಕರಾಗಿರುವುದರಿಂದ ಜೀವಂತ ಪ್ರಮಾಣ ಪತ್ರ ನೋಂದಾಯಿಸಲು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳು ಮತ್ತು ಬ್ಯಾಂಕ್‍ಗಳಿಗೆ ಭೇಟಿ ನೀಡುವಂತೆ ಈಗಾಗಲೇ ಮಾಹಿತಿ ನೀಡಲಾಗಿದೆ.
ಸಾಮಾನ್ಯ ಸೇವಾ ಕೇಂದ್ರ ಮತ್ತು ಬ್ಯಾಂಕ್‍ಗಳಲ್ಲದೇ, ಈಗ ಭವಿಷ್ಯ ನಿಧಿ ಪಿಂಚಣಿದಾರರು ತಮ್ಮ ಮನೆಯಿಂದಲೇ ಜೀವಂತ ಪ್ರಮಾಣ ಪತ್ರವನ್ನು ಪೋಸ್ಟ್ ಮ್ಯಾನ್/ಡಾಕ್ ಸೇವಕರ ಮೂಲಕ ಸಲ್ಲಿಸಬಹುದು. ಪಿಂಚಣಿದಾರರು ಪೋಸ್ಟ್ ಮ್ಯಾನ್/ಡಾಕ್ ಸೇವಕರನ್ನು ತಮ್ಮ ಮನೆಗಳಿಗೆ ಕಳುಹಿಸುವಂತೆ ಪೋಸ್ಟ್ ಅಧಿಕಾರಿಗಳಿಗೆ ವಿನಂತಿಸಬಹುದು. ಅಥವಾ ತಮ್ಮ ಹತ್ತಿರದ ಅಂಚೆ ಕಚೇರಿಗೆ ಖುದ್ದಾಗಿ ಭೇಟಿ ಮಾಡಬಹುದು. ಈ ಸೇವೆಗಾಗಿ ಪಿಂಚಣಿದಾರರು 70 ರೂ.ಗಳನ್ನು ಶುಲ್ಕವಾಗಿ ಪೋಸ್ಟ್ ಮ್ಯಾನ್/ಡಾಕ್ ಸೇವಕರು/ಅಂಚೆ ಕಚೇರಿಗೆ ಪಾವತಿಸಬೇಕು.
ಕೋವಿಡ್ 19 ಸಾಂಕ್ರಾಮಿಕ ರೋಗದ ಪ್ರಸ್ತುತ ಪರಿಸ್ಥಿತಿಯಲ್ಲಿ ಹಿರಿಯ ನಾಗರೀಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‍ನ ಮೊಬೈಲ್ ಸಂ: 9900701264, 8667861021, 9741543980 ಮತ್ತು ದಾವಣಗೆರೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‍ನ ಸಂಖ್ಯೆ 8050780327 & 9535051666 ನ್ನು ಸಂಪರ್ಕಿಸಬಹುದು. ಹಾಗೂ ಜೀವಂತ ಪ್ರಮಾಣ ಪತ್ರ ಸಲ್ಲಿಸುವ ಸೇವೆಯನ್ನು ಬುಕ್ ಮಾಡಲು ಟಾಲ್ ಫ್ರೀ ಸಂಖ್ಯೆ 155299ನ್ನು ಸಂಪರ್ಕಿಸಬಹುದೆಂದು ಸಹಾಯಕ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ.