ಭೋಪಾಲ್: ಸ್ಯಾಂಡಲ್ವುಡ್ ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ‘ಮಿಲನ’ ಸಿನಿಮಾ ನೆನಪಿಸುವಂತಹ ಅಪರೂಪದ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.
ಪತ್ನಿಯನ್ನು ಬಿಡಲಾರದೇ, ಪ್ರೀತಿಸಿದ ಯುವತಿಯಿಂದಲೂ ದೂರವಾಗಲಾರದೇ ಒದ್ದಾಡುತ್ತಿದ್ದ ಗಂಡನನ್ನು ಪ್ರಿಯತಮೆಯೊಂದಿಗೆ ಸೇರಿಸುವ ಮೂಲಕ ಪತ್ನಿ ಅಪರೂಪದ ನಡೆ ಅನುಸರಿಸಿದ್ದಾರೆ. ಆಕೆಯ ನಿರ್ಧಾರಕ್ಕೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.
ಮದುವೆಗೆ ಮೊದಲೇ ಪ್ರೀತಿಸಿದ ವ್ಯಕ್ತಿ ಕಾರಣಾಂತರದಿಂದ ಬೇರೆ ಹುಡುಗಿಯೊಂದಿಗೆ ಮದುವೆಯಾಗಿದ್ದ. ಆದರೂ, ಆತ ಪ್ರೀತಿಸಿದ ಯುವತಿಯೊಂದಿಗೆ ಸಂಬಂಧ ಮುಂದುವರಿಸಿದ್ದ. ಇಬ್ಬರನ್ನು ಬಿಟ್ಟಿರಲು ಸಾಧ್ಯವಾಗದ ಕಾರಣ ಇಬ್ಬರೊಂದಿಗೂ ವೈವಾಹಿಕ ಸಂಬಂಧ ಬೆಳೆಸಲು ಆತ ಬಯಸಿದ್ದ. ಆದರೆ, ಕಾನೂನಿನ ಪ್ರಕಾರ ಅದು ಸಾಧ್ಯವಾಗಿರಲಿಲ್ಲ. ಆತನನ್ನು ಮದುವೆಯಾಗಿದ್ದ ಪತ್ನಿ ಅಚ್ಚರಿಯ ನಿರ್ಧಾರ ಕೈಗೊಂಡು ಗಂಡನಿಗೆ ಡೈವೋರ್ಸ್ ಕೊಟ್ಟು ಪ್ರೇಯಸಿಯೊಂದಿಗೆ ಮದುವೆಯಾಗಲು ಅವಕಾಶ ಮಾಡಿಕೊಟ್ಟಿದ್ದಾಳೆ ಎಂದು ಹೇಳಲಾಗಿದೆ.