alex Certify BIG BREAKING: ಸಮೀಕ್ಷೆಯಲ್ಲಿ ಬಹಿರಂಗವಾಯ್ತು ಬೈಎಲೆಕ್ಷನ್ ಭವಿಷ್ಯ, RR ನಗರದಲ್ಲಿ ಮುನಿರತ್ನಗೆ ಭರ್ಜರಿ ಜಯ -ಶಿರಾದಲ್ಲೂ ಅರಳಲಿದೆ ಕಮಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಸಮೀಕ್ಷೆಯಲ್ಲಿ ಬಹಿರಂಗವಾಯ್ತು ಬೈಎಲೆಕ್ಷನ್ ಭವಿಷ್ಯ, RR ನಗರದಲ್ಲಿ ಮುನಿರತ್ನಗೆ ಭರ್ಜರಿ ಜಯ -ಶಿರಾದಲ್ಲೂ ಅರಳಲಿದೆ ಕಮಲ

ಬೆಂಗಳೂರು: ಉಪ ಚುನಾವಣೆ ನಡೆದ ಶಿರಾ ಮತ್ತು ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸುವ ಸಾಧ್ಯತೆ ಇದೆ.

ಸಿ -ವೋಟರ್ ಸಮೀಕ್ಷೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಮುನಿರತ್ನ ಮತ್ತು ರಾಜೇಶ್ ಗೌಡ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆರ್.ಆರ್. ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೆಚ್ಚಿನ ಶೇಕಡ 37.7 ರಷ್ಟು ಮತ ಗಳಿಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಶೇಕಡಾ 31.11 ರಷ್ಟು ಮತ ಪಡೆಯಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಶೇಕಡ 14 ರಷ್ಟು ಮತ ಗಳಿಸಲಿದ್ದಾರೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ.

ಶಿರಾ ಚುನಾವಣೆಯಲ್ಲಿ ಕೂಡ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಜಯಗಳಿಸಲಿದ್ದಾರೆ ಎಂದು ಸಿ –ವೋಟರ್ ಚುನಾವಣೋತ್ತರ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಆದರೆ, ಸಮೀಕ್ಷೆಯೇ ಸತ್ಯವಲ್ಲ, ಅದು ಮತದಾರರ ಆಯಾ ಸಂದರ್ಭ, ಪರಿಸ್ಥಿತಿಯನ್ನು ಆಧರಿಸಿರುತ್ತದೆ. ನಿಖರವಾದ ಫಲಿತಾಂಶಕ್ಕಾಗಿ ಮತ ಎಣಿಕೆ ದಿನದವರೆಗೂ ಕಾಯಬೇಕಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...