ಹಾಡಾಗಿ ಬದಲಾಯ್ತು ಡೋನಾಲ್ಡ್ ಟ್ರಂಪ್ ಭಾಷಣ..! 07-11-2020 5:35PM IST / No Comments / Posted In: Latest News, Entertainment ಸಂಗೀತಗಾರರು ಉತ್ತಮ ಸಂಗೀತವನ್ನ ಹುಟ್ಟು ಹಾಕೋಕೆ ಎಲ್ಲಿಂದ ಸ್ಪೂರ್ತಿ ಪಡೀತಾರೆ ಅಂತಾ ಹೇಳೋಕೆ ಬರಲ್ಲ. ಕೆಲ ದಿನಗಳ ಹಿಂದಷ್ಟೇ ಹಿಂದಿ ಧಾರಾವಾಹಿಯೊಂದರ ಸಂಭಾಷಣೆಯನ್ನ ಬಳಸಿಕೊಂಡು ಹಾಡನ್ನ ತಯಾರಿಸಿದ್ದ ಯಶ್ರಾಜ್ ಮುಖಾಟೆ ನೆಟ್ಟಿಗರ ಹಾಟ್ ಫೇವರಿಟ್ ಆಗೋಗಿದ್ರು. ಇದೀಗ ಇಂತಹದ್ದೇ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಈ ಸಂಗೀತ ನಿರ್ದೇಶಕ ಡೋನಾಲ್ಡ್ ಟ್ರಂಪ್ರ ಭಾಷಣದ ತುಣುಕುಗಳನ್ನ ಬಳಸಿಕೊಂಡು ಹಾಡೋಂದನ್ನ ರೆಡಿ ಮಾಡಿದ್ದಾರೆ. ಮಯೂರ್ ಜುಮಾನಿ ಎಂಬ ಸಂಗೀತ ನಿರ್ದೇಶಕ ಇಂತಹದ್ದೊಂದು ವಿಭಿನ್ನ ಪ್ರಯತ್ನ ಮಾಡಿ ಸಕ್ಸಸ್ ಆಗಿದ್ದಾರೆ. ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ಅಹಮದಾಬಾದ್ಗೆ ಬಂದಿದ್ದ ಟ್ರಂಪ್ ಮಾಡಿದ್ದ ಭಾಷಣದ ತುಣುಕುಗಳನ್ನ ಬಳಸಿ ಈ ವಿಡಿಯೋ ಮಾಡಲಾಗಿದೆ. ಅಹಮದಾಬಾದ್ ಗೆ ಬಂದಿದ್ದ ಟ್ರಂಪ್ ಭಾಷಣದ ವೇಳೆ ಸ್ವಾಮಿ ವಿವೇಕಾನಂದರ ಹೆಸರನ್ನ ತಪ್ಪಾಗಿ ಉಚ್ಚರಿಸಿ ಟ್ರೋಲಿಗರ ಬಾಯಿಗೆ ಆಹಾರವಾಗಿದ್ರು. ಇದೀಗ ಇದೇ ತುಣುಕನ್ನ ಬಳಸಿ ಈ ಹಾಡನ್ನ ನಿರ್ಮಿಸಲಾಗಿದೆ. ಈ ಹಾಡಿಗೆ ವೀವೆಕಾಮುನಂದ್ ಮಿಕ್ಸ್ ಅಂತಾ ಹೆಸರಿಡಲಾಗಿದೆ. ಹಾಡಿನಲ್ಲಿ ಇನ್ನೂ ಮಜಾ ಇರಲಿ ಅಂತಾ ಬಿಡೆನ್ ಹಾಗೂ ಟ್ರಂಪ್ ನಡುವಿನ ಡಿಬೇಟ್ನ ಕೆಲ ತುಣಕನ್ನೂ ಆಡ್ ಮಾಡಲಾಗಿದೆ. On Public Demand, uploading it here as well! Check out the HD version on https://t.co/hHTOBFKofX#trump2020 #vivekamunand #USElection2020 pic.twitter.com/mggLT3hcmv — Mayur Jumani (@MayurJumani) November 4, 2020