ಚೀನಾದಲ್ಲಿ ಅಪರೂಪದ ಹುಲಿ ಪತ್ತೆ 07-11-2020 4:30PM IST / No Comments / Posted In: Latest News, International ಜಂಗಲ್ ಸಫಾರಿಗೆ ಹೋದಾಗ ಕಾಡು ಪ್ರಾಣಿಗಳು ಕಾಣಿಸಿಕೊಂಡರೆ ಅದನ್ನ ನೋಡೋದೇ ಒಂದು ಮಜಾ. ಅದರಲ್ಲೂ ಅಳಿವನಂಚಿನಲ್ಲಿರುವ ಅಪರೂಪದ ಜಾತಿಯ ಪ್ರಾಣಿಗಳು ಕಾಣಿಸಿಕೊಂಡರಂತೂ ವನ್ಯಜೀವಿ ಪ್ರಿಯರಿಗೆ ಖುಷಿಯ ಬಾಡೂಟ ಬಡಿಸಿದಂತೆ. ಚೀನಾದಲ್ಲೂ ಕೂಡ ಅರಣ್ಯಾಧಿಕಾರಿಗಳು ಕಾಡಿನ ಪರಿಶೀಲನೆ ತೆರಳಿದ್ದ ವೇಳೆ ಸೈಬೀರಿಯನ್ ಹುಲಿ ಕಾಣಿಸಿಕ್ಕಿದೆ. ಈಶಾನ್ಯ ಚೀನಾದ ಜಿಲಿನ್ ಪ್ರಾಂತ್ಯದಲ್ಲಿ ಅರಣ್ಯ ಅಧಿಕಾರಿಗಳು ಸ್ಥಳೀಯ ಅರಣ್ಯ ಫಾರ್ಮ್ನಲ್ಲಿ ವಾಡಿಕೆಯ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಅವರ ಕಣ್ಣಿಗೆ ಅಳಿವಿನಂಚಿನಲ್ಲಿರುವ ಸೈಬಿರಿಯನ್ ಹುಲಿ ರಸ್ತೆಯ ಪಕ್ಕದಲ್ಲೇ ಕಂಡಿದ್ದು ಅಧಿಕಾರಿಗಳು ಆಶ್ಚರ್ಯಚಕಿತರಾಗಿದ್ದಾರೆ. ಹುಲಿಯ ಗಂಭೀರ ನೋಟ ಕಂಡು ಅಧಿಕಾರಿಗಳು ಭಯಭೀತರಾದರೂ ಸಹ ಕಾರನ್ನ ನಿಧಾನವಾಗಿ ಚಲಿಸಿ ಹುಲಿಯ ಚಲನವಲನವನ್ನ ಸೆರೆ ಹಿಡಿದಿದ್ದಾರೆ. ಆದರೆ ಇದ್ಯಾವುದರ ಬಗ್ಗೆ ತಲೆಯೇ ಕೆಡಿಸಿಕೊಳ್ಳದ ಹುಲಿ ತನ್ನಷ್ಟಕ್ಕೆ ತಾನು ವಿಹಾರ ನಡೆಸಿದೆ. ಸೈಬೀರಿಯನ್ ಹುಲಿಗಳು ಪೂರ್ವ ರಷ್ಯಾ ಪ್ರದೇಶ ಹಾಗೂ ಈಶಾನ್ಯ ಚೀನಾ ಪ್ರದೇಶದಲ್ಲಿ ಅಪರೂಪವಾಗಿ ಕಾಣಸಿಗುತ್ತವೆ.