ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ವಯಸ್ಸಾಗಲ್ಲ ಎಂಬ ಮಾತು 69 ವರ್ಷದ ಈ ಮಹಿಳೆಗೆ ಹೇಳಿ ಮಾಡಿಸಿದಂತಿದೆ. ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ವಾಸಿಸುತ್ತಿರುವ ಅಲ್ಫೋನ್ಸೋ ಹೆಸರಿನ ಈ ವೃದ್ಧೆ ನಿತ್ಯ ಬಸ್ನಲ್ಲಿ ಸಂಗೀತಗೋಷ್ಠಿ ನಡೆಸುತ್ತಾರೆ.
ಹಾಸ್ಯಮಯ ಸಾಹಿತ್ಯವನ್ನ ಹೊಂದಿರುವ ಈಕೆಯ ಹಾಡುಗಳು ಪ್ರಯಾಣಿಕರನ್ನ ರಂಜಿಸುತ್ತೆ. ನಾನು ನನ್ನಿಂದಾದ ಪ್ರಯತ್ನ ಮಾಡಿದ್ದೇನೆ. ನಿಮಗೆ ಹಣ ನೀಡೋಕೆ ಸಾಧ್ಯವಾಗದೇ ಇದ್ದರೆ ಒಂದು ಕಿಸ್ ನೀಡಿ ಅಂತಾರೆ ಅಲ್ಫೋನ್ಸೋ.
ವೆಜಿಜುವೆಲಾದಿಂದ ಕೊಲಂಬಿಯಾಗೆ ವಲಸೆ ಬಂದಿರುವ ಈ ವೃದ್ಧೆ ನಿತ್ಯ ಸರಿಸುಮಾರು 8 ಡಾಲರ್ ರೂಪಾಯಿ ಗಳಿಸುತ್ತಾರಂತೆ. ಗ್ಲುಕೋಮಾದಿಂದ ಬಳಲುತ್ತಿರುವ ಅಲ್ಫೊನ್ಸೋಗೆ ಎಡಗಣ್ಣು ಕಾಣುವುದಿಲ್ಲ. ಹೀಗಾಗಿ ಸ್ಟ್ರೀಟ್ ರ್ಯಾಪರ್ ಆಗೋದು ಕಷ್ಟವಾದ್ದರಿಂದ ಈ ವೃದ್ಧೆ ಬಸ್ಗಳಲ್ಲೇ ತಮ್ಮ ಸಂಗೀತ ಸುಧೆಯನ್ನ ಹರಿಸುತ್ತಾರೆ