ಕಳೆದ ವಾರವಷ್ಟೇ ಏಜಿಯನ್ ಸಮುದ್ರದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಟರ್ಕಿ ಸೇರಿದಂತೆ ಹಲವಾರು ಗ್ರೀಕ್ ದ್ವೀಪಗಳು ಭಾರೀ ನಷ್ಟವನ್ನ ಅನುಭವಿಸಿವೆ.
ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 116ಕ್ಕೆ ಏರಿಕೆಯಾಗಿದೆ.
ರಕ್ಷಣಾ ಕಾರ್ಯಾಚರಣೆ ಅಂದರೆ ಸುಮ್ಮನೇ ಅಲ್ಲ. ತಮ್ಮ ಜೀವವನ್ನ ಪಣಕ್ಕಿಟ್ಟು ಇನ್ನೊಂದು ಜೀವವನ್ನ ರಕ್ಷಿಸಬೇಕು. ಅದೇ ರೀತಿ ಟರ್ಕಿಯ ರಕ್ಷಣಾ ಪಡೆಯಲ್ಲಿರುವ ಕುಬ್ಜ ಸಿಬ್ಬಂದಿ ತನ್ನ ಸಣ್ಣ ದೇಹವನ್ನೇ ಲಾಭ ಮಾಡಿಕೊಂಡು ಅವಶೇಷಗಳಡಿ ತೆವಳುತ್ತ ಅನೇಕರನ್ನ ರಕ್ಷಿಸುವ ಕಾರ್ಯ ಮಾಡಿದ್ದಾರೆ.
ಕೇವಲ ಮೂರು ಅಡಿ ಎತ್ತರವಿರುವ ರಿಡ್ವಾನ್ ಇಜ್ಮಿರ್ನಲ್ಲಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ನಾಲ್ಕು ದಿನಗಳಿಂದ ಜೀವವನ್ನ ಪಣಕ್ಕಿಟ್ಟು ರಿಡ್ವಿನ್ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ರಿಜ್ವಿನ್, ನಾನು ಸ್ವಂತ ಖರ್ಚಿನಲ್ಲಿ ಇಜ್ಮಿರ್ಗೆ ಬಂದಿದ್ದೇನೆ. ಟರ್ಕಿಯ ಭೂಕಂಪ ನನಗೆ 1999ರ ಘಟನೆಗಳು ನೆನಪಿಸುತ್ತಿದೆ ಅಂತಾ ಹೇಳಿದ್ರು .