ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಮೂರು ವಾರ್ಷಿಕ ಯೋಜನೆ ಪರಿಚಯಿಸಿದೆ. ಈ ಹೊಸ ಯೋಜನೆಯು ಅನ್ ಲಿಮಿಟೆಡ್ ಕರೆಗಳು, 504 ಜಿಬಿ ಡೇಟಾ ನೀಡಲಿವೆ, ಈ ಹೊಸ ಯೋಜನೆಯ ಮಾನ್ಯತೆ 336 ದಿನಗಳು ಅಂತಾ ಸಂಸ್ಥೆ ಹೇಳಿದೆ.
1001, 1301 ಹಾಗೂ 1501 ರೂಪಾಯಿಗಳ ರೀ ಚಾರ್ಜ್ಗೆ ಈ ವಾರ್ಷಿಕ ಯೋಜನೆ ಸಿಗಲಿವೆ. 1001 ರೂಪಾಯಿಯ ಪ್ಲಾನ್ನಲ್ಲಿ ದೈನಂದಿನ ಡೇಟಾ ಮಿತಿ 150 ಎಂಬಿ ಇರಲಿದೆ. ಅಲ್ಲದೇ ಜಿಯೋ ಅಲ್ಲದ ಮೊಬೈಲ್ ಕರೆಗಳಿಗೆ 12000 ನಿಮಿಷ ಉಚಿತವಾಗಿ ನೀಡಲಿದೆ. ಹಾಗೂ 100 ಎಸ್ಎಂಎಸ್ಗಳೂ ಫ್ರೀಯಾಗಿ ಸಿಗಲಿವೆ. ಹಾಗೂ ಜಿಯೋ ಟು ಜಿಯೋ ಕರೆಗಳು ಉಚಿತವಾಗಿರಲಿದೆ.
1301 ರೂಪಾಯಿಯ ಯೋಜನೆಯಲ್ಲಿ 164 ಜಿಬಿ 4ಜಿ ಡೇಟಾ ಸಿಗಲಿದ್ದು ದೈನಂದಿನ ಡೇಟಾ ಮಿತಿ 500 ಎಂಬಿ ಇರಲಿದೆ. ಜಿಯೋ ಟು ಜಿಯೋ ಉಚಿತ ಕರೆ ಹಾಗೂ ಜಿಯೋ ಅಲ್ಲದ ಸಂಖ್ಯೆಗಳಿಗೆ 12 ಸಾವಿರ ನಿಮಿಷ ಉಚಿತ ಕರೆ ಅವಧಿ ಇರಲಿದೆ.
1501 ರೂಪಾಯಿ ಪ್ಲಾನ್ನಲ್ಲಿ ದಿನಕ್ಕೆ 1.5 ಜಿಬಿ ಡೇಟಾ ಸಿಗಲಿದೆ. ಒಟ್ಟು 336 ದಿನಕ್ಕೆ 504 ಜಿಬಿ ಇರಲಿದೆ. ಜಿಯೋ ಟು ಜಿಯೋ ಫ್ರೀ ಕಾಲ್ ಇರಲಿದೆ. ಹಾಗೂ ಜಿಯೋ ಅಲ್ಲದ ಸಂಖ್ಯೆಗಳಿಗೆ 12 ಸಾವಿರ ನಿಮಿಷ ಉಚಿತ ಕರೆ ಸಿಗಲಿದೆ.