ಕಳೆದ ಕೆಲ ದಿನಗಳಿಂದ ತ್ವರಿತ ಮೆಸ್ಸೇಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ಸಂದೇಶಗಳನ್ನು ಅಳಿಸಿ ಹಾಕುವ ವೈಶಿಷ್ಟ್ಯ Disappearing Messages ಮೇಲೆ ಕೆಲಸ ಮಾಡ್ತಿದೆ ಎಂಬ ಸುದ್ದಿಯಿತ್ತು.
ವಾಟ್ಸಾಪ್ ಎಲ್ಲ ಊಹಾಪೋಹಗಳಿಗೂ ಈಗ ತೆರೆ ಎಳೆದಿದೆ. ವಾಟ್ಸಾಪ್ Disappearing Messages ವೈಶಿಷ್ಟ್ಯವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಈ ತಿಂಗಳ ಅಂತ್ಯದ ವೇಳೆಗೆ ಈ ವೈಶಿಷ್ಟ್ಯ ಎಲ್ಲ ವಾಟ್ಸಾಪ್ ಬಳಕೆದಾರರಿಗೂ ಲಭ್ಯವಾಗಲಿದೆ. ಈ ವೈಶಿಷ್ಟ್ಯದಲ್ಲಿ ವಾಟ್ಸಾಪ್ ಬಳಕೆದಾರರು ಹಳೆ ಸಂದೇಶಗಳನ್ನು ಡಿಲೀಟ್ ಮಾಡುವ ಅಗತ್ಯವಿಲ್ಲ. ಸಂದೇಶಗಳು ಸ್ವಯಂಚಾಲಿತವಾಗಿ ಡಿಲೀಟ್ ಆಗಲಿದೆ.
ಫೇಸ್ಬುಕ್ ಒಡೆತನದ ಕಂಪನಿ ವಾಟ್ಸಾಪ್, ಫೇಸ್‌ಬುಕ್‌ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದೆ. ಕಂಪನಿಯ ಬ್ಲಾಗ್ ಪೋಸ್ಟ್ ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಬಳಕೆದಾರರ ಹಳೆಯ ಸಂದೇಶಗಳು ಮತ್ತು ಚಾಟ್‌ಗಳು ಸ್ವಯಂಚಾಲಿತವಾಗಿ ಡಿಲೀಟ್ ಆಗುತ್ತವೆ.
Disappearing Messages ವೈಶಿಷ್ಟ್ಯವೆಂದರೆ ಅದು ನಿಮ್ಮ ವಾಟ್ಸಾಪ್‌ನಲ್ಲಿನ ಸಂದೇಶಗಳನ್ನು 7 ದಿನಗಳಲ್ಲಿ ಸ್ವಯಂಚಾಲಿತವಾಗಿ ಡಿಲೀಟ್ ಮಾಡುತ್ತದೆ. ಇದು ಜಿಮೇಲ್, ಟೆಲಿಗ್ರಾಂ,ಸ್ನ್ಯಾಪ್ ಚಾಟ್ ನಲ್ಲಿರುವ ವೈಶಿಷ್ಟ್ಯಗಳಂತೆ ಕಾರ್ಯನಿರ್ವಹಿಸುತ್ತದೆ ಎಂದು ವಿವರಿಸಲಾಗಿದೆ.
ಈ ವೈಶಿಷ್ಟ್ಯವನ್ನು ಬಳಸಲು ಬಯಸಿದರೆ, ಇದಕ್ಕಾಗಿ ವಾಟ್ಸಾಪ್ ಖಾತೆಗೆ ಹೋಗಿ ಅದನ್ನು ಸಕ್ರಿಯಗೊಳಿಸಬೇಕು. ಕಣ್ಮರೆಯಾಗುತ್ತಿರುವ ಸಂದೇಶಗಳ ವೈಶಿಷ್ಟ್ಯವನ್ನು ಆನ್ ಮಾಡಿದರೆ, ನಿಮ್ಮ ಚಾಟ್ 7 ದಿನಗಳಲ್ಲಿ ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತದೆ. ಚಾಟ್ ಕಣ್ಮರೆಯಾಗಲು ಬಯಸದಿದ್ದರೆ, ಈ ವೈಶಿಷ್ಟ್ಯವನ್ನು ಆಫ್ ಮಾಡಬಹುದು.