ಕೊರೊನಾ ಜನರ ಆದಾಯವನ್ನು ಸೀಮಿತಗೊಳಿಸಿದೆ. ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ಸಂದರ್ಭದಲ್ಲಿ ಕಡಿಮೆ ಬಿಲ್ ಬರಲು ಏನು ಮಾಡ್ಬೇಕೆಂಬ ಚಿಂತೆಯಲ್ಲಿ ಜನರಿದ್ದಾರೆ. FYOOL ಅಪ್ಲಿಕೇಶನ್ ಮೂಲಕ ಪೆಟ್ರೋಲ್, ಡಿಸೇಲ್ ಬಿಲ್ ಕಡಿಮೆ ಮಾಡಬಹುದು.
FYOOL ಅಪ್ಲಿಕೇಶನ್, ಪೇಟಿಎಂ, ಫೋನ್ ಪೇ ರೀತಿಯಲ್ಲಿಯೇ ಕೆಲಸ ಮಾಡುತ್ತದೆ. ಬಹಳಷ್ಟು ಕ್ಯಾಶ್ಬ್ಯಾಕ್ ನೀಡುತ್ತದೆ. ಪೆಟ್ರೋಲ್, ಡೀಸೆಲ್ ಮತ್ತು ಸಿಎನ್ಜಿ ಬಿಲ್ ಪಾವತಿ ನಂತ್ರ FYOOL ಅಪ್ಲಿಕೇಶನ್ ನಲ್ಲಿ ನಿಮಗೆ ಕ್ಯಾಶ್ ಬ್ಯಾಕ್ ಸಿಗುತ್ತದೆ. FYOOL ಅಪ್ಲಿಕೇಶನ್ ಪೆಟ್ರೋಲ್, ಡೀಸೆಲ್, ಸಿಎನ್ಜಿ ಮತ್ತು ಆಲ್ಕೋಹಾಲ್ ಬಿಲ್ ಪಾವತಿ ನಂತ್ರ ಕ್ಯಾಶ್ಬ್ಯಾಕ್ ನೀಡುತ್ತದೆ. ಇದನ್ನು ಮನೆ ವಸ್ತುಗಳ ಖರೀದಿಗೆ ಬಳಸಬಹುದು. ಇಲ್ಲವೆ ಬೇರೆಯವರಿಗೆ ಹಣ ವರ್ಗಾಯಿಸಬಹುದು. ಇದನ್ನು ದೆಹಲಿಯ ರೌನಕ್ ಶರ್ಮಾ ಅಭಿವೃದ್ಧಿಪಡಿಸಿದ್ದಾರೆ. ಬಳಕೆದಾರರಿಗೆ ಕ್ಯಾಶ್ಬ್ಯಾಕ್ ನೀಡಲು ವಿವಿಧ ಕಂಪನಿಗಳು ಮತ್ತು ಬ್ರಾಂಡ್ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಪೇಟಿಎಂ ಅಪ್ಲಿಕೇಷನ್ ಗಿಂತ ಇದು ಭಿನ್ನವಾಗಿದೆ. ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಖರೀದಿ ಮಾಡಿದ ನಂತ್ರ ಅದ್ರ ಬಿಲ್ ಫೋಟೋ ತೆಗೆದು ಅದನ್ನು ಅಪ್ಲಿಕೇಷನ್ ನಲ್ಲಿ ಅಪ್ಲೋಡ್ ಮಾಡಬೇಕು. ಈ ಅಪ್ಲಿಕೇಷನ್ ನಲ್ಲಿ ನಿಮಗೆ ಕ್ಯಾಶ್ಬ್ಯಾಕ್ ಸಿಗುತ್ತದೆ. ಆ ಹಣವನ್ನು ನೀವು ವಸ್ತುಗಳ ಖರೀದಿಗೆ ಬಳಸಬಹುದು.