alex Certify 17 ರ ಹರೆಯದ ಪತ್ನಿಗೆ 22 ದಿನಗಳಲ್ಲೇ ಡಿವೋರ್ಸ್ ಕೊಟ್ಟ 78 ವರ್ಷದ ವೃದ್ದ..! ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ…!! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

17 ರ ಹರೆಯದ ಪತ್ನಿಗೆ 22 ದಿನಗಳಲ್ಲೇ ಡಿವೋರ್ಸ್ ಕೊಟ್ಟ 78 ವರ್ಷದ ವೃದ್ದ..! ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ…!!

ಕೆಲ ದಿನಗಳ ಹಿಂದಷ್ಟೇ 17 ವರ್ಷದ ಯುವತಿಯನ್ನ ಮದುವೆಯಾಗಿ ಸುದ್ದಿಯಾಗಿದ್ದ ಇಂಡೋನೇಷ್ಯಾದ 78 ವರ್ಷದ ವೃದ್ಧ ಇದೀಗ ತನ್ನ ವೈವಾಹಿಕ ಜೀವನ ಮುರಿದುಕೊಳ್ಳಲು ನಿರ್ಧರಿಸಿದ್ದಾನೆ. ಕಳೆದ ತಿಂಗಳಷ್ಟೇ ವಿವಾಹವಾಗಿ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸೌಂಡ್​ ಮಾಡಿದ್ದ ಈ ಜೋಡಿ ಕಳೆದ ವಾರ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿವೆ .

ವೃದ್ಧ ಅಬಾ ಸರ್ನಾ ವಿಚ್ಚೇದನದ ವಿಚಾರ ಪ್ರಸ್ತಾಪ ಮಾಡುತ್ತಿದ್ದಂತೆ ನೋನಿ ನವಿತಾ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಇವರಿಬ್ಬರ ದಾಂಪತ್ಯದಲ್ಲಿ ಯಾವುದೇ ಸಮಸ್ಯೆ ಕಂಡು ಬರದೇ ಇದ್ದರೂ ವಿಚ್ಚೇದನಕ್ಕೆ ಮುಂದಾಗಿರೋದು ನೋನಿ ಕುಟುಂಬಸ್ಥರನ್ನ ಆತಂಕಕ್ಕೆ ದೂಡಿತ್ತು.

ಇನ್ನು ಈ ವಿಚಾರವಾಗಿ ಮಾತನಾಡಿರುವ ನೋನಿ ಸಹೋದರಿ ಇಯಾನ್​, ಅವರಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ – ಕಲಹಗಳು ಇದ್ದಿರಲಿಲ್ಲ. ದಿಢೀರ್​ ಈ ವಿಚ್ಚೇದನದ ನಿರ್ಧಾರ ಕೈಗೊಂಡಿರೋದನ್ನ ಕೇಳಿ ನಾನು ಶಾಕ್​ಗೆ ಒಳಗಾದೆ ಅಂತಾ ಹೇಳಿದ್ದಾರೆ. ಮದುವೆಗೂ ಮುನ್ನವೇ ನೋನಿ ಗರ್ಭಿಣಿಯಾಗಿದ್ದರು ಎಂಬ ವಿಚಾರ ಕೇಳಿ ಅಬಾ ಡಿವೋರ್ಸ್ ನೀಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡ್ತಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...