ದೀರ್ಘಕಾಲದ ಟೀಕೆಗೆ ಗುರಿಯಾಗಿದ್ದ ಕಾರ್ಮಿಕ ನೀತಿಯನ್ನ ಸುಧಾರಿಸುವ ಮೂಲಕ ವಲಸೆ ಕಾರ್ಮಿಕರ ಮೇಲಿದ್ದ ನಿರ್ಬಂಧಗಳನ್ನ ತೆಗೆದುಹಾಕಿರುವುದಾಗಿ ಸೌದಿ ಅರೇಬಿಯಾ ಹೇಳಿದೆ.
ಮಾನವ ಹಕ್ಕುಗಳ ಗುಂಪು ಸೌದಿ ಅರೇಬಿಯಾದಲ್ಲಿದ್ದ ಕಾರ್ಮಿಕ ನೀತಿಯನ್ನ ಸುಧಾರಿಸುವಂತೆ ಹೇಳಿತ್ತು . ಸೌದಿ ಅರೇಬಿಯಾದಲ್ಲಿದ್ದ ಕಾರ್ಮಿಕ ನೀತಿ ಆಧುನಿಕ ಗುಲಾಮಗಿರಿ ಅಂತಾ ಟೀಕಿಸಲಾಗಿತ್ತು.
ಆದರೆ ಈಗ ಕಾರ್ಮಿಕ ನೀತಿಯನ್ನ ಸುಧಾರಿಸಲಾಗಿದ್ದು ಇದರನ್ವಯ ಕಾರ್ಮಿಕರು ತಮ್ಮ ಉದ್ಯೋಗದಾತರ ಅನುಮತಿ ಇಲ್ಲದೇ ನಿರ್ಗಮನ ವೀಸಾ ಪಡೆಯಬಹುದಾಗಿದೆ. ಈ ಹೊಸ ನಿಯಮಗಳು ಮಾರ್ಚ್ 14ರಿಂದ ಜಾರಿಗೆ ಬರಲಿದೆ.
ನಿರ್ಗಮನ ಹಾಗೂ ಮರುಪ್ರವೇಶ ಮಾಡುವ ವಲಸಿಗ ಕಾರ್ಮಿಕರು ಇನ್ಮುಂದೆ ಉದ್ಯೋಗದಾತರ ಅನುಮೋದನೆ ಪಡೆಯುವ ಅವಶ್ಯಕತೆ ಇಲ್ಲ. ಹಾಗೂ ದೇಶದಿಂದ ನಿರ್ಗಮನ ಮಾಡಲಿಚ್ಚಿಸುವ ಕಾರ್ಮಿಕರ ಮಾಹಿತಿಯನ್ನ ಉದ್ಯೋಗದಾತರಿಗೆ ವಿದ್ಯುನ್ಮಾನವಾಗಿ ತಿಳಿಸಲಾಗುತ್ತೆ.