ಅನೇಕ ಸಿನಿಮಾಗಳ ಮೂಲಕ ಅಭಿಮಾನಿಗಳ ದಂಡೇ ಹೊಂದಿರುವ ರಕ್ಷಿತ್ ಶೆಟ್ಟಿ 777 ಚಾರ್ಲಿ ಸಿನಿಮಾದಲ್ಲಿ ಬ್ಯುಸಿಯಾಗಿರೋದು ಗೊತ್ತಿರುವ ವಿಚಾರವೇ. ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಇದಾಗಿದ್ದು, ಅಭಿಮಾನಿಗಳು ಕೂಡ ವೇಯ್ಟ್ ಮಾಡ್ತಾ ಇದ್ದಾರೆ. ಇದೀಗ ಈ ಸಿನಿಮಾಗೆ ಸಂಬಂಧಪಟ್ಟಂತೆ ದೊಡ್ಡ ನ್ಯೂಸ್ ಒಂದನ್ನು ನೀಡಲಿದ್ದಾರಂತೆ ರಕ್ಷಿತ್ ಶೆಟ್ಟಿ.
ಹೌದು, ಹೀಗಂತ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಇದೇ ಶುಕ್ರವಾರ ಬೆಳಗ್ಗೆ 7.30ಕ್ಕೆ ನಿಮಗೆಲ್ಲ ಒಂದು ಸರ್ಪ್ರೈಸ್ ಕಾದಿದೆ ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಜೊತೆಗೆ 777 ಚಾರ್ಲಿ ಸಿನಿಮಾದ ಪೋಸ್ಟರ್ ಒಂದನ್ನು ಹಾಕಿದ್ದಾರೆ. ಇವರ ಈ ಪೋಸ್ಟ್ ನಿಜಕ್ಕೂ ಅಭಿಮಾನಿಗಳಲ್ಲಿ ಕಾತುರತೆಯನ್ನು ಹೆಚ್ಚಿಸಿದೆ.
777 ಚಾರ್ಲಿ ಸಿನಿಮಾವನ್ನು ಕಿರಣ್ ರಾಜ್ ನಿರ್ದೇಶನ ಮಾಡುತ್ತಿದ್ದು, ಪುಷ್ಕರ್ ಫಿಲ್ಮ್ಸ್ ಮತ್ತು ರಕ್ಷಿತ್ ಶೆಟ್ಟಿಯವರ ಪರಂವಃ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಾಣ ಮಾಡಿವೆ. ಸಿನಿಮಾದ ಚಿತ್ರೀಕರಣ ಆಲ್ಮೋಸ್ಟ್ ಮುಗಿಯುವ ಹಂತಕ್ಕೆ ಬಂದಿದೆ. ಕೊನೆಯ ಹಂತದ ಚಿತ್ರೀಕರಣವನ್ನು ಕಾಶ್ಮೀರದಲ್ಲಿ ಮಾಡಲಾಗುತ್ತದೆ.