alex Certify ಶಾಕಿಂಗ್ ನ್ಯೂಸ್: ಪದೇ ಪದೇ ಮನೆಗೆ ಬಂದು ಅಪ್ರಾಪ್ತನಿಂದಲೇ ಆಘಾತಕಾರಿ ಕೃತ್ಯ, ಬಾಲಕಿ ಗರ್ಭಿಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್ ನ್ಯೂಸ್: ಪದೇ ಪದೇ ಮನೆಗೆ ಬಂದು ಅಪ್ರಾಪ್ತನಿಂದಲೇ ಆಘಾತಕಾರಿ ಕೃತ್ಯ, ಬಾಲಕಿ ಗರ್ಭಿಣಿ

ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ 14 ವರ್ಷದ ಬಾಲಕನಿಂದ 12 ವರ್ಷದ ಬಾಲಕಿ ಗರ್ಭಿಣಿಯಾದ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕೂಲಿ ಕಾರ್ಮಿಕರ ಮಗನಾಗಿರುವ 14 ವರ್ಷದ ಹುಡುಗನೊಂದಿಗೆ ಆರನೇ ತರಗತಿ ಬಾಲಕಿಗೆ ಪ್ರೇಮಾಂಕುರವಾಗಿತ್ತು ಎಂದು ಹೇಳಲಾಗಿದೆ. ಬಾಲಕಿ ಇತ್ತೀಚೆಗೆ ವಾಂತಿ ಮಾಡಿಕೊಂಡು ತೀವ್ರ ಅಸ್ವಸ್ಥಳಾಗಿದ್ದು, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪರೀಕ್ಷಿಸಿದ ವೈದ್ಯರು ಗರ್ಭಿಣಿಯಾಗಿರುವುದನ್ನು ದೃಢಪಡಿಸಿದ್ದು, ಕಂಗಾಲಾದ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಬರುತ್ತಿದ್ದ ಬಾಲಕ ಅನುಚಿತವಾಗಿ ವರ್ತಿಸುತ್ತಿದ್ದ. ವಿರೋಧಿಸಿದಾಗ ಬೆದರಿಕೆ ಹಾಕಿದ್ದು, ಪೋಷಕರಿಗೆ ವಿಚಾರ ತಿಳಿಸಲು ಭಯಪಟ್ಟುಕೊಂಡಿದ್ದೆ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...