ಚಿಕ್ಕಮಗಳೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ನಿರ್ದೇಶಕಿ ಮಾಳವಿಕಾ ಹೆಗ್ಡೆ ಸೇರಿದಂತೆ 8 ಮಂದಿಯ ಬಂಧನಕ್ಕೆ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಜೆ.ಎಂ.ಎಫ್.ಸಿ. ಕೋರ್ಟ್, ಕಾಫಿ ಖರೀದಿ ಚೆಕ್ ಬೌನ್ಸ್ ಪ್ರಕರಣದಲ್ಲಿ ದಿವಂಗತ ಸಿದ್ದಾರ್ಥ ಹೆಗ್ಡೆ ಅವರ ಪತ್ನಿ ಮಾಳವಿಕಾ ಹೆಗ್ಡೆ ಅವರ ಬಂಧನಕ್ಕೆ ಆದೇಶಿಸಿದೆ.
ಬೆಳೆಗಾರರಿಂದ ಕಾಫಿ ಖರೀದಿಸಿದ್ದು, ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ನಿಂದ ನೀಡಲಾಗಿದ್ದ ಚೆಕ್ ಗಳು ಅಮಾನ್ಯವಾಗಿದೆ ಎಂದು ದಾವೆ ಹೂಡಲಾಗಿತ್ತು. ಕೋರ್ಟ್ ಗೆ ಹಾಜರಾಗುವಂತೆ ಕಾಫಿ ಡೇ ಸಂಸ್ಥೆಯ 8 ಮಂದಿಗೆ ಸಮನ್ಸ್ ಜಾರಿಯಾಗಿದ್ದರೂ ಅವರು ಹಾಜರಾಗಿರಲಿಲ್ಲ. ಈ ಕಾರಣದಿಂದ ಬಂಧನಕ್ಕೆ ಜಾಮೀನುರಹಿತ ವಾರಂಟ್ ಹೊರಡಿಸಲಾಗಿದೆ ಎಂದು ಹೇಳಲಾಗಿದೆ.