alex Certify ʼಆಂಟಿʼ ಎಂದು ಕರೆದಿದ್ದಕ್ಕೆ ನಡೆದೇ ಹೋಯ್ತು ಮಾರಾಮಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಂಟಿʼ ಎಂದು ಕರೆದಿದ್ದಕ್ಕೆ ನಡೆದೇ ಹೋಯ್ತು ಮಾರಾಮಾರಿ

ಲಖನೌ: ಸ್ವಲ್ಪ ವಯಸ್ಸಾದ ಮಹಿಳೆಯರನ್ನು ಕಂಡರೆ ಮಕ್ಕಳು ಕೆಲ ಬಾರಿ ದೊಡ್ಡವರೂ ಅವರನ್ನು ‘ಆಂಟಿ’ ಎಂದು ಸಂಬೋಧಿಸುವ ಪರಿಪಾಠ ಇತ್ತೀಚೆಗೆ ಬೆಳೆದಿದೆ.

ಆದರೆ, ಹಲವು ಮಹಿಳೆಯರಿಗೆ ‘ಆಂಟಿ’ ಎಂದು ಕರೆಯುವುದು ಇಷ್ಟವಾಗುವುದಿಲ್ಲ. ಹಾಗೆ ಕರೆದಿದ್ದಕ್ಕಾಗಿ ಉತ್ತರ ಪ್ರದೇಶದಲ್ಲಿ ದೊಡ್ಡ ಮಾರಾಮಾರಿಯೇ ನಡೆದು ಹೋಗಿದೆ.

ಹೌದು, ಆಂಟಿ ಎಂದು ಯುವತಿಯೊಬ್ಬಳು ಇನ್ನೊಬ್ಬ ಮಹಿಳೆಯನ್ನು ಸಂಬೋಧಿಸಿದ್ದಕ್ಕಾಗಿ ಜನನಿಬಿಡ ಮಾರುಕಟ್ಟೆಯಲ್ಲಿ ಮಹಿಳೆ ಹಾಗೂ ಆಕೆಯ ಸ್ನೇಹಿತೆಯರ ಗುಂಪು ಯುವತಿಯ ಜುಟ್ಟು ಹಿಡಿದು ಎಳೆದಾಡಿ ಥಳಿಸಿದ ವಿಡಿಯೋವೊಂದು ವೈರಲ್ ಆಗಿದೆ. ಸೋಮವಾರ ಸಾಯಂಕಾಲ ಕರ್ವಾ ಚೌತ್ ಸಾಮಗ್ರಿಗಳ ಖರೀದಿಗಾಗಿ ಮಹಿಳೆಯರಿಂದ ತುಂಬಿದ್ದ ಬಾಬುಗಂಜ್ ಮಾರುಕಟ್ಟೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.

ಹಿಂದುಸ್ಥಾನ್ ಲೈವ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್‌ಲೋಡ್ ಆದ ಮಹಿಳೆಯರ ಹೊಡೆದಾಟದ ವಿಡಿಯೋ ಸಖತ್ ವೈರಲ್ ಆಗಿದೆ. 77 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅಲ್ಲಿ, ಮಹಿಳೆಯರ ಕುಸ್ತಿ ತಪ್ಪಿಸಲು ಒಬ್ಬ ಮಹಿಳಾ ಪೊಲೀಸ್ ಪೇದೆ ಕೂಡ ಇರುವುದು ಕಂಡುಬರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...