ಹರಿಯಾಣ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದ ಬಳಿಕ ಇದೀಗ ಕರ್ನಾಟಕ ಕೂಡ ಅನ್ಯಧರ್ಮೀಯ ವಿವಾಹ ವಿರೋಧಿ ಕಾನೂನನ್ನ ತರಲು ಮುಂದಾಗಿದೆ.
ಈ ವಿಚಾರವಾಗಿ ಮಾತನಾಡಿದ ಸಚಿವ ಸಿ.ಟಿ. ರವಿ, ವಿವಾಹ ಉದ್ದೇಶದಿಂದ ಮತಾಂತರವಾಗುವುದನ್ನು ನಿಷೇಧಿಸುವ ಕುರಿತು ಕಾನೂನು ತರಲು ಚಿಂತನೆ ನಡೆಸಿದ್ದೇವೆ . ರಾಜ್ಯದ ಮಹಿಳೆಯರ ಘನತೆಗೆ ಧಕ್ಕೆ ಬಂದರೆ ಅದನ್ನ ನಮ್ಮ ಸರ್ಕಾರ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಅನ್ಯಧರ್ಮೀಯ ವಿವಾಹ ಉದ್ದೇಶಕ್ಕೆ ಧರ್ಮಾಂತರ ಮಾಡುವುದನ್ನ ಒಪ್ಪಲಾಗುವುದಿಲ್ಲೆಂದು ಅಲಹಾಬಾದ್ ಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ಬಿಜೆಪಿ ಆಡಳಿತವಿರುವ ರಾಜ್ಯಗಳು ಅಂತರ್ ಧರ್ಮೀಯ ವಿವಾಹ ವಿರುದ್ಧ ಕಾನೂನು ಜಾರಿ ಮಾಡಲು ಮುಂದಾಗಿವೆ.