ಬೆಂಗಳೂರು: ರಾಜ್ಯದ ಎರಡು ಕ್ಷೇತ್ರಗಳಲ್ಲಿ ಇಂದು ಉಪಚುನಾವಣೆಗೆ ಇಂದು ಮತದಾನ ನಡೆದಿದ್ದು ಆರ್.ಆರ್. ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಮತದಾನವಾಗಿದೆ.
ಸಂಜೆ 5 ಗಂಟೆಯವರೆಗೆ ಆರ್.ಆರ್. ನಗರದಲ್ಲಿ ಶೇಕಡ 39.15 ರಷ್ಟು ಮತದಾನವಾಗಿದ್ದು, ಶಿರಾದಲ್ಲಿ ಶೇಕಡ 77.34 ರಷ್ಟು ಮತದಾನವಾಗಿದೆ. ನಗರ ಪ್ರದೇಶದ ಜನ ಸಾಮಾನ್ಯವಾಗಿ ಮತದಾನದಿಂದ ದೂರವೇ ಉಳಿಯುತ್ತಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಈ ಬಾರಿ ಕೊರೋನಾ ಕಾರಣದಿಂದ ಹೆಚ್ಚಿನ ಸಂಖ್ಯೆಯ ಜನ ಮತದಾನ ಮಾಡಿಲ್ಲ ಎಂದು ಹೇಳಲಾಗಿದೆ.
ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಚುನಾವಣೆ ನಡೆಸುತ್ತಿದ್ದರೂ, ಬಹುತೇಕ ಜನ ಓಟ್ ಮಾಡಲು ಧೈರ್ಯ ತೋರಿಲ್ಲ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಭಾಗಿಯಾಗಿದ್ದಾರೆ. ಶಿರಾ ಕ್ಷೇತ್ರದಲ್ಲಿ ಶೇಕಡ 77.34 ರಷ್ಟು ಮತದಾನವಾಗಿದೆ. ಆದರೆ, ಆರ್.ಆರ್. ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.