ಹಿಂದಿಯ ಹೆಸರಾಂತ ಶೋ ಕೌನ್ ಬನೇಗಾ ಕರೋಡ್ಪತಿಯಲ್ಲಿ ಹಿಂದೂ ಭಾವನೆಗೆ ವಿರುದ್ಧವಾದ ಪ್ರಶ್ನೆ ಕೇಳಲಾಗಿದೆ ಎಂದು ಆರೋಪಿಸಿ ಅಮಿತಾಬ್ ಬಚ್ಚನ್ ಹಾಗೂ ಸೋನಿ ಕಾರ್ಯಕ್ರಮ ಸಂಯೋಜಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಲಾತೂರ್ ಜಿಲ್ಲೆಯ ಬಿಜೆಪಿ ಶಾಸಕರಾದ ಅಭಿಮನ್ಯೂ ಪವಾರ್ ಹಿಂದೂ ಭಾವನೆಗೆ ಧಕ್ಕೆಯಾಗಿದೆ ಎಂಬ ಆರೋಪದಡಿಯಲ್ಲಿ ಲಾತೂರ್ನಲ್ಲಿ ಅಮಿತಾಭ್ ಹಾಗೂ ಕೆಬಿಸಿ ಮೇಕರ್ಸ್ ವಿರುದ್ಧ ದೂರು ದಾಖಲಿಸಿದ್ದಾರೆ .
ಶುಕ್ರವಾರದ ಕರಮ್ವೀರ್ ವಿಶೇಷ ಸಂಚಿಕೆಯಲ್ಲಿ ನಟ ಅನುಪ್ ಸೋನಿ ಹಾಗೂ ಸಾಮಾಜಿಕ ಕಾರ್ಯಕರ್ತ ಬೇಜ್ವಾಡಾ ವಿಲ್ಸನ್ ಹಾಟ್ಸೀಟ್ನಲ್ಲಿ ಕುಳಿತಿದ್ರು. ಈ ವೇಳೆ ಅಮಿತಾಬ್ ಭಚ್ಚನ್ 6.40 ಲಕ್ಷ ರೂಪಾಯಿ ಮೌಲ್ಯಕ್ಕೆ 1927ರ ಡಿಸೆಂಬರ್ 25ರಂದು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಅವರ ಅನುಯಾಯಿಗಳು ಯಾವ ಗ್ರಂಥದ ಪ್ರತಿಗಳನ್ನು ಸುಟ್ಟು ಹಾಕಿದರು? ಎಂದು ಪ್ರಶ್ನೆ ಕೇಳಿದ್ದಾರೆ.
ಇದಕ್ಕೆ ಆಯ್ಕೆ ರೂಪದಲ್ಲಿ ಎ. ವಿಷ್ಣುಪುರಾಣ ಬಿ. ಭಗವದ್ಗೀತೆ, ಸಿ. ಋಗ್ವೇದ, ಡಿ. ಮನುಸ್ಮೃತಿ ಎಂದು ಆಯ್ಕೆಗಳನ್ನ ನೀಡಲಾಗಿತ್ತು. ಸ್ಪರ್ಧಿಗಳು ಡಿ. ಮನುಸ್ಮೃತಿ ಎಂದು ಉತ್ತರ ನೀಡಿದ್ದಾರೆ. ಇದು ಸರಿಯಾದ ಉತ್ತರವೆಂದು ಹೇಳಿದ ಅಮಿತಾಬ್ 1927ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಿಂದೂ ಧರ್ಮಟ ಗ್ರಂಥದ ಪ್ರತಿಗಳನ್ನ ಸುಟ್ಟು ಹಾಕಿದ್ದಾರೆ ಎಂದು ಹೇಳಿದ್ದರು.