ಬಾಲಿವುಡ್ನ ಹೆಸರಾಂತ ನಟ ಅಮಿತಾಭ್ ಬಚ್ಚನ್ ಕೌನ್ ಬನೇಗಾ ಕರೋಡ್ಪತಿ ಶೋ ನಡೆಸಿಕೊಡ್ತಾ ಇರೋದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಶೋನಲ್ಲಿ ಅಮಿತಾಬ್ ಬಚ್ಚನ್ ತಮ್ಮ ಕರೊನಾದ ದಿನಗಳನ್ನ ನೆನಪಿಸಿಕೊಂಡಿದ್ದಾರೆ. ಹಾಗೂ ನಮ್ಮ ಆಮ್ಲಜನಕ ಮಟ್ಟವನ್ನ ಹೇಗೆ ಸುಧಾರಿಸಿಕೊಳ್ಳಬಹುದು ಅನ್ನೋದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಶೋಗೆ ಬಂದಿದ್ದ ಅಪರ್ಣಾ ಎಂಬವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಮಾತನಾಡಿದ ಬಿಗ್ ಬಿ, ಕರೊನಾ ಸಮಯದಲ್ಲಿ ಆಸ್ಪತ್ರೆಯಲ್ಲಿದ್ದ ದಿನಗಳನ್ನ ನೆನೆಸಿಕೊಂಡರು. ಜುಲೈ ತಿಂಗಳಲ್ಲಿ ಕರೊನಾ ಸೋಂಕಿಗೆ ಒಳಗಾಗಿದ್ದ ವೇಳೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಹಾಗೂ ಆಸ್ಪತ್ರೆಯಲ್ಲಿ ಪ್ರತಿ ಎರಡು ಗಂಟೆಗಳಿಗೊಮ್ಮೆ ಆಮ್ಲಜನಕ ಪೂರೈಕೆ ಪ್ರಮಾಣವನ್ನ ಪರೀಕ್ಷಿಸಲಾಗುತ್ತಿತ್ತು ಅಂತಾ ಹೇಳಿದ್ದಾರೆ.
ಕರೊನಾ ಸೋಂಕಿಗೆ ಒಳಗಾಗಿದ್ದ ವೇಳೆ ಅಮಿತಾಬ್ರ ಆಮ್ಲಜನಕ ಮಟ್ಟ 92-93 ಇತ್ತು. ಆದರೆ ವೈದ್ಯರು ಅದು 98 ಇರಬೇಕು ಅಂತಾ ಹೇಳಿದ್ದರು . ಹೀಗಾಗಿ ನಾನು ಆಸ್ಪತ್ರೆ ಸಿಬ್ಬಂದಿ ಆಕ್ಸಿಮೀಟರ್ ತೆಗೆದುಕೊಂಡು ಬರ್ತಿದ್ದಂತೆ ನನ್ನ ಉಸಿರನ್ನ ಒಳಕ್ಕೆ ಎಳೆದುಕೊಳ್ತಿದೆ. ಆಗ ಒಮ್ಮಿಂದೊಮ್ಮೆಲೆ ಆಮ್ಲಜನಕ ಪ್ರಮಾಣ ಏರಿಕೆಯಾಗುತ್ತಿತ್ತು ಎಂಬ ರಹಸ್ಯವನ್ನ ಬಹಿರಂಗಪಡಿಸಿದ್ದಾರೆ.