ವ್ಯಾಪಾರ ವ್ಯವಹಾರ ಮಾಡೋವಾಗ ಲೆಕ್ಕ ತಪ್ಪಾಗಿ ಹಣ ಜಾಸ್ತಿ ಕೊಟ್ಟುಬಿಟ್ಟರೆ ನಮಗೆ ಎಲ್ಲಿಲ್ಲದ ನೋವು ಶುರುವಾಗುತ್ತೆ. ಅನ್ಯಾಯವಾಗಿ ಹಣ ಕಳೆದುಕೊಂಡು ಬಿಟ್ವಲ್ಲ ಎಂಬ ನಿರಾಶೆಯೂ ಕಾಡುತ್ತೆ. ಆದರೆ ಪಾನಮತ್ತನಾಗಿದ್ದ ವ್ಯಕ್ತಿಯೊಬ್ಬ ಪಿಜ್ಜಾ ಡೆಲಿವರಿ ಬಾಯ್ಗೆ ಡಬಲ್ ಹಣವನ್ನ ತಪ್ಪಾಗಿ ನೀಡಿದ್ರೂ ಸಹ ತಾನು ಮಾಡಿದ ತಪ್ಪಿಗೆ ಖುಶಿ ಪಟ್ಟಿದ್ದಾರೆ.
ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹಸಿವಾದ ಕಾರಣ ಪಿಜ್ಜಾ ಆರ್ಡರ್ ಮಾಡಿದ್ದಾರೆ. ಪಿಜ್ಜಾ ಡೆಲಿವರಿ ಬಾಯ್ ಮನೆ ಬಾಗಿಲಿಗೆ ಬರುತ್ತಿದ್ದಂತೆಯೇ ಆತನಿಗೆ 30 ಡಾಲರ್ ಪಾವತಿಸಿದ್ದು ಮಾತ್ರವಲ್ಲದೇ 20 ಶೇಕಡಾ ಟಿಪ್ಸ್ನ್ನೂನೀಡಿದ್ದಾರೆ. ಕೂಡಲೇ ಡೆಲಿವರಿ ಚಾಲಕ ಧನ್ಯವಾದ ಅರ್ಪಿಸಿ ಅಲ್ಲಿಂದ ತೆರಳಿದ್ದಾನೆ. ಇದಾದ ಬಳಿಕ ಪಿಜ್ಜಾ ಆರ್ಡರ್ ಮಾಡಿದ್ದ ವ್ಯಕ್ತಿಗೆ ತಾನು ಆನ್ಲೈನ್ನಲ್ಲಿ ಮುಂಗಡ ಹಣ ಪಾವತಿ ಮಾಡಿದ್ದೆ ಎಂಬ ವಿಚಾರ ನೆನಪಾಗಿದೆ.
ಕೂಡಲೇ ತನ್ನ ಹಣವನ್ನ ವಾಪಾಸ್ ಕೇಳೋಕೆ ಅಂತಾ ಡೆಲಿವರಿ ಬಾಯ್ ಹತ್ತಿರ ಬರುತ್ತಿದ್ದಾಗ ಆತನ ಮುಖದಲ್ಲಿದ್ದ ಖುಷಿಯನ್ನ ಕಂಡು ಈ ವ್ಯಕ್ತಿ ಮೂಕವಿಸ್ಮಿತರಾಗಿದ್ದಾರೆ. ತನ್ನ ಈ ಅನುಭವವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಆ ವ್ಯಕ್ತಿ , ನಾನೇನು ಬಿಲ್ಗೇಟ್ಸ್ ಅಲ್ಲ. ನನಗೂ ನನ್ನದೇ ಆದ ಆರ್ಥಿಕ ಸಂಕಷ್ಟಗಳಿವೆ. ಆದರೆ ಆ ಡೆಲಿವರಿ ಬಾಯ್ಗೆ ಬಹುಶಃ ನನಗಿಂತ ಹೆಚ್ಚು ಹಣದ ಅವಶ್ಯಕತೆ ಇದೆ ಅನ್ನೋದು ಆತನ ಮುಖ ನೋಡಿ ಎನಿಸಿತು. ಹೀಗಾಗಿ ನಾನು ಹಣವನ್ನ ವಾಪಾಸ್ ಕೇಳಲೇ ಇಲ್ಲ ಅಂತಾ ಬರೆದುಕೊಂಡಿದ್ದಾರೆ.