ಕೆಲವರ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಅಂತವರು ತಮ್ಮ ಚರ್ಮದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಇಲ್ಲವಾದರೆ ವಾತಾವರಣದಲ್ಲಿರುವ ಧೂಳು, ಕೊಳಕು, ಸೂರ್ಯನ ಬಿಸಿಲಿನಿಂದ ಹಾಗೂ ಇನ್ನಿತರ ಕಾರಣದಿಂದ ನಿಮ್ಮ ಚರ್ಮ ಬೇಗ ಹಾನಿಗೊಳಗಾಗುತ್ತದೆ. ಆದ
ಕಾರಣ ಸೂಕ್ಷ್ಮ ಚರ್ಮ ಹೊಂದಿರುವವರು ಈ ಸಲಹೆಗಳನ್ನು ಪಾಲಿಸಿ.
* ಸೂಕ್ಷ್ಮ ಚರ್ಮ ಹೊಂದಿರುವವರು ಯಾವುದೇ ಸೌಂದರ್ಯ ವರ್ಧಕಗಳನ್ನು ಖರೀದಿಸುವಾಗ ಬಹಳ ಎಚ್ಚರದಿಂದಿರಬೇಕು. ಕೆಲವು ಉತ್ಪನ್ನಗಳು ನಿಮ್ಮ ಚರ್ಮಕ್ಕೆ ಹಾನಿಯನ್ನುಂಟುಮಾಡಬಹುದು. ಆದಕಾರಣ ನಿಮ್ಮ ಚರ್ಮಕ್ಕೆ ಸರಿಹೊಂದುವವುಗಳನ್ನೇ ಆರಿಸಿ.
* ಯಾವುದೇ ಹೊಸ ಸೌಂದರ್ಯ ವರ್ಧಕಗಳನ್ನುಮುಖಕ್ಕೆ ಬಳಸು ಮೊದಲು ಅದನ್ನು ನಿಮ್ಮ ಚರ್ಮದ ಮೇಲೆ ಹಚ್ಚಿ 48 ಗಂಟೆಗಳ ಕಾಲ ಪರೀಕ್ಷಿಸಿ. ಏನು ಪರಿಣಾಮವಾಗಿಲ್ಲ ಎಂದ ಮೇಲೆ ಮುಖಕ್ಕೆ ಬಳಸಿ.
* ಸೂಕ್ಷ್ಮ ಚರ್ಮ ಹೊಂದಿರುವವರ ಚರ್ಮ ಒರಟಾದರೆ ಅದು ಬೇಗ ಹಾನಿಗೊಳಗಾಗುತ್ತದೆ. ಆದಕಾರಣ ಚರ್ಮ ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳಿ. ಅದಕ್ಕಾಗಿ ಮಾಯಿಶ್ಚರೈಸರ್ ಹಚ್ಚಿ. ಮತ್ತು ಮೇಕಪ್ ಹಚ್ಚುವ ಮೊದಲು ಮಾಯಿಶ್ಚರೈಸರ್ ಕ್ರೀಂ ಹಚ್ಚಿಕೊಳ್ಳಿ.
*ಉತ್ತಮವಾದ ಆಹಾರ ಪದಾರ್ಥಗಳನ್ನು ಸೇವಿಸಿ. ಯಾಕೆಂದರೆ ಕೆಲವು ಆಹಾರಗಳು ಚರ್ಮಕ್ಕೆ ಹಾನಿಯನ್ನುಂಟು ಮಾಡುವ ಸಾಧ್ಯತೆ ಇದೆ. ಹಾಗೇ ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯಿರಿ.
*ಸೂರ್ಯನ ಬಿಸಿಲಿನಿಂದ ದೂರವಿರಿ. ಇಲ್ಲವಾದರೆ ಸೂರ್ಯನ ಕಿರಣ ನಿಮ್ಮ ಚರ್ಮದಲ್ಲಿ ದದ್ದು, ಅಲರ್ಜಿ ಸಮಸ್ಯೆ ಉಂಟುಮಾಡಬಹುದು. ಹಾಗೇ ಮುಖವನ್ನು ಆಗಾಗ ತೊಳೆಯುತ್ತೀರಿ.