ನವದೆಹಲಿ: ಕೊರೋನಾ ನಂತರದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುವ ಸಲುವಾಗಿ ಕೇಂದ್ರ ಸರ್ಕಾರ 3 ಲಕ್ಷ ಕೋಟಿ ರೂ. ಮೌಲ್ಯದ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ನ್ನು ನವೆಂಬರ್ 30 ರವರೆಗೆ ವಿಸ್ತರಣೆ ಮಾಡಿದೆ.
ಪ್ರಸ್ತುತ ಹಬ್ಬದ ಸೀಸನ್ ಆಗಿರುವ ಹಿನ್ನೆಲೆ ಸಣ್ಣ ಹಾಗೂ ಮಧ್ಯಮ ಉದ್ಯಮದವರಿಗೆ ಅನುಕೂಲವಾಗಬಹುದೆಂಬ ಕಾರಣಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್ನ ಭಾಗವಾಗಿ ಎಂಎಸ್ಎಂಇಗಳು, ವ್ಯಾಪಾರೋದ್ಯಮ ಹಾಗೂ ವ್ಯಾಪಾರ ಉದ್ದೇಶಕ್ಕೆ ವೈಯಕ್ತಿಕ ಸಾಲ ಮತ್ತು ಮುದ್ರಾ ಸಾಲಗಾರರಿಗೆ ಹೆಚ್ಚಿನ ಅನುಕೂಲ ನೀಡುವುದಕ್ಕೋಸ್ಕರ 20.97 ಲಕ್ಷ ಕೋಟಿ ರೂಪಾಯಿ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ನ್ನ ಘೋಷಣೆ ಮಾಡಿತ್ತು .
ಫೆಬ್ರವರಿ 29ರ ವೇಳೆಯಲ್ಲಿ 50 ಕೋಟಿ ರೂಪಾಯಿವರೆಗೆ ಸಾಲ ಹೊಂದಿರುವವರು ಹಾಗೂ ವಾರ್ಷಿಕ 250 ಕೋಟಿ ವಹಿವಾಟು ನಡೆಸುವವರು ಈ ಯೋಜನೆ ಲಾಭ ಪಡೆಯಬಹುದು. ಈ ಯೋಜನೆಯಡಿಯಲ್ಲಿ ನಾಲ್ಕು ವರ್ಷಗಳವರೆಗೆ ಸಾಲ ವಿತರಣೆ ಮಾಡಲಾಗುತ್ತೆ. ಅಲ್ಲದೇ ಒಂದು ವರ್ಷದವರೆಗೆ ಮೊರಟೋರಿಯಂ ಅವಧಿ ಕೂಡ ನೀಡಲಾಗಿದೆ.