ಟ್ರಕ್ಕರ್ ಆಗಿ ಕೆಲಸ ಬಿಟ್ಟ ನಂತರ ತನ್ನ ಕಾರಿನಲ್ಲಿ ವಾಸಿಸುತ್ತಿದ್ದಾತ ಇದೀಗ ಮೈಕ್ರೋಸಾಫ್ಟ್ನಲ್ಲಿ ತನ್ನ ಕನಸಿನ ಕೆಲಸವನ್ನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
ಅಮೆರಿಕದ ಮೆರೈನ್ ಕಾರ್ಪ್ಸ್ನಲ್ಲಿ ಮೋಟಾರ್ ಟ್ರಾನ್ಸ್ಫೋರ್ಟ್ ಆಪರೇಟರ್ ಕೆಲಸ ಮಾಡ್ತಿದ್ದ ಜಾಕ್ ಜೋನ್ಸ್ ತಮ್ಮ ಕೆಲಸವನ್ನ ತೊರೆದಿದ್ರು. ಬಳಿಕ ಸ್ವಂತ ಕಂಪನಿ ಪ್ರಾರಂಭಿಸಲು ಶುರು ಮಾಡಿದ್ರು.
ಆದರೆ 2019ರಲ್ಲಿ ಜಾಕ್ಜೋನ್ಸ್ ಅದೃಷ್ಟ ಕೈಕೊಟ್ಟ ಕಾರಣ ಕುಟುಂಬವನ್ನ ನಡೆಸೋದೇ ಜಾಕ್ಗೆ ಕಷ್ಟವಾಗಿ ಪರಿಣಮಿಸಿತು. ಕಾರಿನ ಹಿಂಭಾಗದಲ್ಲಿ ಜೀವನ ಮಾಡುತ್ತಿದ್ದ ಜಾಕ್ ಉತ್ತಮ ಭವಿಷ್ಯ ಹೊಂದಬೇಕು ಎಂಬ ಹಠವನ್ನ ಇಟ್ಟುಕೊಂಡು ಅಧ್ಯಯನ ಮಾಡಲು ಶುರು ಮಾಡಿದ್ರು. ಮೂರು ತಿಂಗಳ ಕಠಿಣ ಪರಿಶ್ರಮದಿಂದಾಗಿ ಜಾಕ್ ಇದೀಗ ಮೈಕ್ರೋಸಾಫ್ಟ್ನಲ್ಲಿ ಇಂಜಿನಿಯರ್ ಕೆಲಸ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.