ತೈವಾನ್ ಸಲಿಂಗ ಕಾಮಿ ಹಕ್ಕುಗಳ ಆಂದೋಲನದಲ್ಲಿ ಏಷ್ಯಾ ಖಂಡದಲ್ಲೇ ಮುಂಚೂಣಿ ಸ್ಥಾನದಲ್ಲಿದೆ. 2019ರ ಮೇ ತಿಂಗಳಲ್ಲಿ ಸಲಿಂಗ ವಿವಾಹಕ್ಕೆ ಅವಕಾಶ ನೀಡುವ ಮೂಲಕ ಸಲಿಂಗ ವಿವಾಹಕ್ಕೆ ಅನುಮತಿ ನೀಡಿದ ಏಷ್ಯಾದ ಮೊದಲ ರಾಷ್ಟ್ರ ಎನಿಸಿಕೊಂಡಿದೆ.
ಈ ಸಾಧನೆ ಮಾತ್ರವಲ್ಲದೇ ಸತತ 200 ದಿನಗಳಿಂದ ಒಂದೂ ಕರೊನಾ ಕೇಸ್ ದಾಖಲು ಮಾಡದೇ ಮತ್ತೊಂದು ರೆಕಾರ್ಡ್ನ್ನ ಸೃಷ್ಟಿ ಮಾಡಿದೆ. ಹೀಗಾಗಿ ವಿಶ್ವದೆಲ್ಲೆಡೆ ಸಾಮಾಜಿಕ ಅಂತರ ಪಾಲನೆ ಮಾಡುತ್ತಿರುವ ಈ ಸಂದರ್ಭದಲ್ಲಿ ತೈವಾನ್ ದ್ವೀಪ ಮಾತ್ರ ರ್ಯಾಲಿ ನಡೆಸಿದೆ.
ಕಳೆದ ವರ್ಷ ಕಾನೂನು ಬದಲಾವಣೆ ಆದಾಗಿನಿಂದ 4000ಕ್ಕೂ ಹೆಚ್ಚು ಸಲಿಂಗ ಕಾಮಿ ದಂಪತಿ ತಮ್ಮ ವಿವಾಹವನ್ನು ನೋಂದಾಯಿಸಿದ್ದಾರೆ. ಕರೊನಾದಿಂದಾಗಿ ವಿಶ್ವದಾದ್ಯಂತ ಯಾವುದೇ ಸಂಭ್ರಮ ನಡೆಯದ ಈ ಸಂದರ್ಭದಲ್ಲಿ ತೈವಾನೀಸ್ ಜನರು ವಿಶ್ವದ ಎಲ್ಲ ಸಲಿಂಗ ಕಾಮಿಗಳ ಪರವಾಗಿ ಹೆಮ್ಮೆಯ ಮೆರವಣಿಗೆ ನಡೆಸಿದ್ರು.
ಈ ವರ್ಷ ಈ ಮೆರವಣಿಗೆಯಲ್ಲಿ 130000 ಮಂದಿ ಸಲಿಂಗಕಾಮಿಗಳು ಭಾಗವಹಿಸಿದ್ದಾರೆ ಅಂತಾ ಅಂದಾಜಿಸಲಾಗಿದೆ . ಕಳೆದ ವರ್ಷ ಈ ಮೆರವಣಿಗೆಯಲ್ಲಿ 2 ಲಕ್ಷ ಸಲಿಂಗಕಾಮಿಗಳು ಭಾಗಿಯಗಿದ್ರು.