ತ್ಯಾಜ್ಯ ವಸ್ತುಗಳಿಂದ ಕಲಾಕೃತಿಗಳನ್ನ ನಿರ್ಮಾಣ ಮಾಡುವ ಉದ್ದೇಶದಿಂದ ಪಶ್ಚಿಮ ಬಂಗಾಳ ರಾಜ್ಯ ಸಾರಿಗೆ ಇಲಾಖೆ ವಿನೂತನ ಪ್ರಯತ್ನವೊಂದನ್ನ ಮಾಡಿದೆ. ಸಾರಿಗೆ ನಿಗಮದ ಡಿಪೋಗಳಲ್ಲಿದ್ದ ನಿರುಪಯೋಗಿ ಟೈರ್ಗಳನ್ನ ಬಳಸಿ ಕೊಲ್ಕತ್ತಾದಲ್ಲಿ ಟೈರ್ ಪಾರ್ಕ್ ನಿರ್ಮಾಣ ಮಾಡಲಾಗಿದೆ.
ಈ ವಿಚಾರವಾಗಿ ಮಾತನಾಡಿದ ಪಶ್ಚಿಮ ಬಂಗಾಳ ಸಾರಿಗೆ ನಿಗಮದ ಅಧಿಕಾರಿ, ತ್ಯಾಜ್ಯದಿಂದಲೂ ಕಲೆ ಅರಳಿಸಬಹುದು ಎಂಬುದನ್ನ ತೋರಿಸೋಕೆ ಈ ಉದ್ಯಾನವನ್ನ ನಿರ್ಮಿಸಲಾಗಿದೆ. ಕೊಲ್ಕತ್ತಾದ ಈ ಟೈರ್ ಪಾರ್ಕ್ ಇತರೆ ರಾಜ್ಯಗಳಿಗೂ ಮಾದರಿಯಾಗಲಿದೆ ಅಂತಾ ಹೇಳಿದ್ರು .
ಸಾರಿಗೆ ವಿಭಾಗದ ನೌಕರರು ತಮಗೆ ಸಮಯ ಸಿಕ್ಕಾಗಲೆಲ್ಲ ಟೈರ್ಗಳನ್ನ ಬಳಸಿ ಕುರ್ಚಿ, ಉಯ್ಯಾಲೆ ಹಾಗೂ ಟೇಬಲ್ಗಳನ್ನ ನಿರ್ಮಾಣ ಮಾಡುತ್ತಾರೆ. ಈ ಮೂಲಕ ತ್ಯಾಜ್ಯದ ರೂಪದಲ್ಲಿ ಕಸದ ಬುಟ್ಟಿಗೆ ಸೇರಬೇಕಿದ್ದ ಟೈರ್ಗಳು ಉತ್ತಮ ರೂಪ ಪಡೆದುಕೊಳ್ತಿವೆ ಅಂತಾ ರಾಜ್ಯ ಸಾರಿಗೆ ನಿಗಮದ ಎಂಡಿ ರಾಜನಾಬೀರ್ ಸಿಂಗ್ ಕಪೂರ್ ಹೇಳಿದ್ದಾರೆ.